ಶಿರಸಿ:- ಆಟೋರಿಕ್ಷಾ-ಕಾರು ನಡುವೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಐವರು ಗಂಭೀರ ಗಾಯಗೊಂಡಿರುವ ಘಟನೆ ಯಡಳ್ಳಿ ಗ್ರಾಮದ ಬಳಿ ಜರುಗಿದೆ.
Advertisement
  
ಅಟೋದಲ್ಲಿದ್ದ ಆಶೋಕ ಶಿರಾಲಿ (52) ನಿಲೇಕಣಿ ವಿಶಾಲಾಕ್ಷಿ (55) ಅಂಭಾಗಿರಿ ತ್ರಿಶಾ ಅಶೋಕ ಶಿರಾಲಿ (9), ಅನಿತಾ ಅಶೋಕ ಶಿರಾಲಿ (40), ಆದರ್ಶ ಅಶೋಕ ಶಿರಾಲಿ (18) ಅಪರಂಜಿತ (45) ಗಂಭೀರವಾಗಿ ಗಾಯಗೊಂಡಿದ್ದಾರೆ.
ದೀಪಾವಳಿ ನಿಮಿತ್ತ ದೇವಾಸ್ಥಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ದೇವಾಸ್ಥಾನದಿಂದ ಮನೆಗೆ ವಾಪಾಸ್ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಗಾಯಾಳುಗಳನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.


