ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ CID ಇದೀಗ ನೀರಾವರಿ ಇಲಾಖೆಯ ಇಂಜಿನಿಯರ್ ರುದ್ರಗೌಡ ಎಂಬಾತನನ್ನ ಖೆಡ್ಡಾಗೆ ಕೆಡವಿದ್ದಾರೆ.
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪ ಹೊಂದಿರುವ ರುದ್ರಗೌಡ ಮೂಲತ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದವನು.
ಸದ್ಯ ಅಥಣಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತಿದ್ದ ಎನ್ನಲಾಗಿದೆ.. ವಿಶೇಷ ಅಂದ್ರೆ ಬಂಧಿತ ರುದ್ರಗೌಡ ಬಳಿ 17 ಹಾಲ್ ಟಿಕೇಟ್‌ಗಳು ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಹಾಲ್ ಟಿಕೇಟ್ ಹಿಂದಿನ ಕಥೆ ಏನೂಂತ ಬಾಯ್ಬಿಡಿಸಲು ಮುಂದಾಗಿದ್ದಾರೆ…



