ಹಾವೇರಿ: ಮಳೆಯಿಂದ ಬಿದ್ದ ಮನೆಗೆ ಸರಕಾರದ ಪರಿಹಾರ ಪಡೆಯಲು ಜಿಪಿಎಸ್ ಮಾಡಿಸಲು ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.
Advertisement
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮ ಪಂಚಾಯತಿ ಸದಸ್ಯ ಜಾಫರ್‌ಸಾಬ್ ಖಾದರಸಾಬ್ ಸಂಶಿ ಎಂಬುವರೇ ಲೋಕಾಯುಕ್ತರ ಬಲೆಗೆ ಬಿದ್ದವರು.
ದಾದಾಪೀರ್ ಎಂಬುವರ ಮನೆಗೆ ಜಿಪಿಎಸ್ ಮಾಡಿಸಬೇಕಾದರೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.
ಬುಧವಾರ ರಾತ್ರಿ ದಾದಾಪೀರ್ ಅವರಿಂದ 20ಸಾವಿರ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿ ಮಾಡಿ ಬಲೆಗೆ ಬೀಳಿಸಿದ್ದಾರೆ.