ಗದಗ:- ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದಾಗಿ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷರ ಕಷ್ಟ ಕೇಳೋರೆ ಇಲ್ಲದಂತಾಗಿದೆ.
ಬಸ್ ಸೀಟ್ ಗಳಿಗಾಗಿ ಪುರುಷ ಪ್ರಯಾಣಿಕರು ಹರಸಾಹಸ ಪಟ್ಟಿದ್ದಾರೆ. ಕಿಟಕಿ ಮೂಲಕ ಬಸ್ ಹತ್ತೋಕೆ ಯತ್ನಿಸಲಾಗುತ್ತಿದ್ದು, ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈ ದೃಶ್ಯಗಳು ಕಂಡು ಬಂದಿದೆ. ಕಿಟಕಿಯಲ್ಲಿ ತೂರಿಕೊಂಡು ಬಸ್ ಒಳಗೆ ಪುರುಷ ಪ್ರಯಾಣಿಕರು ಪ್ರವೇಶ ಮಾಡ್ತಿದ್ದಾರೆ.
ಇದೇ ವೇಳೆ ಕಿಟಕಿ ಮೂಲಕ ಹತ್ತಲೆತ್ನಿಸಿದ ಪುರುಷ ಪ್ರಯಾಣಿಕನನ್ನ ಬಸ್ ಚಾಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಳಿ ಕೆಳಗೆ ಗೊತ್ತಾಗೋದಿಲ್ವಾ ನಿಮಗೆ ಅಂತಾ ಕಿಟಕಿಯಿಂದ ಚಾಲಕ ಕೆಳಗಿಳಿಸಿದ್ದಾರೆ. ಚಾಲಕ ಅತ್ತ ಹೋಗ್ತಿದ್ದಂತೆ ಮತ್ತೆ ಕಿಟಕಿ ಮೂಲಕ ಬಸ್ ಹತ್ತಿ ಪ್ರಯಾಣಿಕರು ಒಳಹೋಗಿದ್ದಾರೆ.
ನಾವೇನೂ ಕಮ್ಮಿ ಇಲ್ಲ ಎನ್ನೋವಂತೆ ಮಹಿಳಾ ಪ್ರಯಾಣಿಕರಿಂದಲೂ ಕಿಟಕಿ ಮೂಲಕ ಬಸ್ ಹತ್ತೋ ಯತ್ನ ಮಾಡಿದ್ದಾರೆ. ಇಂದು ಗೌರಿ ಹುಣ್ಣಿಮೆ ಹಿನ್ನೆಲೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳೋ ಪ್ರಯಾಣಿಕರು ಹೆಚ್ಚಿರೋ ಹಿನ್ನೆಲೆಯಲ್ಲಿ ಹೆಚ್ಚಿನ ಪರದಾಟ ನಡೆಸಿದ್ದಾರೆ.