ಕೋಲಾರ:– ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೆಬ್ಬಟ ಕ್ರಾಸ್ ನಲ್ಲಿ ವಾಮಾಚಾರಕ್ಕಾಗಿ ಮೃತದೇಹ ಹೊರ ತೆಗೆದ ಘಟನೆ ಜರುಗಿದೆ.
ಕಳೆದ 20 ದಿನಗಳ ಹಿಂದೆ, ಮೂರುವರೆ ವರ್ಷದ ಮಗುವಿನೊಂದಿಗೆ ತಾಯಿ ಮೆಹದಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿನ ನಂತರ, ಹೆಬ್ಬಟ ಕ್ರಾಸ್ ನ ಸ್ಮಶಾನದಲ್ಲಿ ಸಂಸ್ಕಾರ ಮಾಡಲಾಗಿತ್ತು.
ನವೆಂಬರ್ 19 ರಂದು ಮಗುವಿನ ಶವ ಹೊರತೆಗೆದು ಕೂದಲು ಹಾಗು ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿರುವ ಆರೋಪ ಕೇಳಿ ಬಂದಿದೆ.
ಮೃತ ಹಮೀದ್ ಪೋಷಕರಿಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಹಮೀದ್ ಪತಿ ಶೊಯಬ್ ಸೂಚನೆಯಂತೆ, ಮಗುವಿನ ಶವ ಹೊರ ತೆಗೆದು ಕೃತ್ಯ ಆರೋಪ ಮಾಡಲಾಗಿದೆ.
ಸ್ಮಶಾನಕ್ಕೆ ತೆರಳಿ, ಶವ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವರ ವಿರುದ್ದ ಪ್ರಕರಣ ದಾಖಲಾಗಿದೆ. ನವೆಂಬರ್ 19 ರಂದು ಬೆಳ್ಳಂ ಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿ, ತಡವಾಗಿ ವಾಪಾಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾಮಾಚಾರ ಮಾಡಲೆಂದು ಮಗುವಿನ ಮೃತದೇಹ ಹೊರಗೆದಿರುವ ಆರೋಪ ಕೇಳಿ ಬಂದಿದೆ. ಪತಿ ಶೊಯಬ್ ವರದಕ್ಷಿಣೆ ಹಿಂಸೆ ತಾಳಲಾರದೆ, ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರ ಆರೋಪ ಕೇಳಿಬಂದಿದೆ.
ಅಂತ್ಯಸಂಸ್ಕಾರದ ವೇಳೆ ಶವಕ್ಕೆ ಹಾಕಿದ್ದ ಬಟ್ಟೆಗಳು, ಸಮಾಧಿಯ ಪಕ್ಕದಲ್ಲೆ ಪತ್ತೆಯಾಗಿದೆ. ಇಬ್ಬರ ಶವಗಳು ಇದೆಯೋ, ಇಲ್ವೊ ಎಂಬುದು ಪೋಷಕರಲ್ಲಿ ಆತಂಕ ಶುರುವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.