ಕೋಲಾರ: ತಂದೆ-ತಾಯಿಯನ್ನು ನೋಡೋದಕ್ಕೆ ಆಗದಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ವಸತಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಇಲಿ ಪಾಶಾಣ ಹಾಕಿದ್ದಾನೆ. ಈ ನೀರು ಕುಡಿದ ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಬಂಗಾರಪೇಟೆ ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪೋಷಕರಿಂದ ದೂರವಿದ್ದುದಕ್ಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ.
ಆತನ ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮಗ ಚೆನ್ನಾಗಿ ಓದಲಿ ಅನ್ನೋ ಕಾರಣಕ್ಕೆ ವಸತಿ ಶಾಲೆಗೆ ಸೇರಿಸಿದ್ದರು. ಆದ್ರೆ ತಂದೆ-ತಾಯಿಯಿಂದ ದೂರವಿದ್ದುದರಿಂದ ಆತ ಖಿನ್ನತೆಗೆ ಒಳಗಾಗಿದ್ದ. ಶಾಲೆಗೆ ರಜೆ ಸಿಕ್ಕರೆ ಮನೆಗೆ ಹೋಗಬಹುದು ಎಂದು ಲೆಕ್ಕಚಾರ ಹಾಕಿದ್ದ. ಏನು ಮಾಡಿದರೆ ಶಾಲೆಗೆ ರಜೆ ಕೊಡಬಹುದು ಎಂದು ಯೋಚಿಸಿದ ಆತ, ಟ್ಯಾಂಕ್‌ಗೆ ಇಲಿ ಪಾಶಾಣ ಹಾಕಿದ್ದಾನೆ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ರಜೆ ಕೊಡುತ್ತಾರೆ. ಆಗ ಕೆಲ ದಿನ ಮನೆಗೆ ಹೋಗಬಹುದು. ತಂದೆ-ತಾಯಿಯನ್ನು ನೋಡಬಹುದು ಅನ್ನೋ ಆಸೆ ಅವನದಾಗಿತ್ತು. ಆದ್ರೆ ಇದರಿಂದಾಗಿ ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.