CCB ಬಲೆಗೆ ಬಿದ್ದ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ

0
Spread the love

ಬೆಂಗಳೂರು:- ಸಿಸಿಬಿ ಅಧಿಕಾರಿಗಳ ಬಲೆಗೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಬಿದ್ದಿದ್ದಾರೆ. ಕನ್ನಡ ಚಲನಚಿತ್ರವೊಂದಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಪಡೆಯುವಾಗ ಸಿಸಿಬಿ ಅಧಿಕಾರಿಗಳ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ.

Advertisement

ಸೆನ್ಸಾರ್ ಮಂಡಳಿಯ ಅಧಿಕಾರಿ ಪ್ರಶಾಂತ್ ಕುಮಾರ್. ‘ಅಡವಿ’ ಹೆಸರಿನ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರ್ಮಾಪಕರಿಗೆ ಪ್ರಶಾಂತ್ ಕುಮಾರ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಹಾಗಾಗಿ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ಟೈಗರ್ ನಾಗ್, ನಟ ಆಸ್ಕರ್ ಕೃಷ್ಣ ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಲಂಚ ಪಡೆಯುವಾಗಲೇ ಅಧಿಕಾರಿ ಪ್ರಶಾಂತ್ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಮಲ್ಲೇಶ್ವರಂ ಎಸ್.ಆರ್.ವಿ ಸ್ಟುಡಿಯೋದಲ್ಲಿ ರೀಜನಲ್ ಆಫೀಸರ್ ಅನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹೊಸ ನಿರ್ಮಾಪಕರನ್ನು ಟಾರ್ಗೆಟ್ ಮಾಡಿ ಸತಾಯಿಸಿ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಹಣ ಪೀಕುತಿದ್ದ ಎನ್ನಲಾಗಿದೆ.

‘ಅಡವಿ’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಒಂದು ವಾರದಿಂದ ಸತಾಯಿಸುತ್ತಿದ್ದ, ಸೆನ್ಸಾರ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಸಿಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ಸಿಸಿಬಿ ಕಚೇರಿಗೆ ತೆರಳಿ ದೂರು ನೀಡಿದ್ದರು.

ನಿನ್ನೆ ಸಂಜೆ 6 ರ ಸುಮಾರಿನಲ್ಲಿ ಅಧಿಕಾರಿ ಪ್ರಶಾಂತ್ ಕುಮಾರ್, ಟೈಗರ್ ನಾಗ್​ರಿಂದ ಲಂಚ ಪಡೆಯುವ ಸಮಯದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಲ್ಲೇಶ್ವರಂನ ಎಸ್ ಆರ್ ವಿ ಥಿಯೇಟರ್ ನಲ್ಲಿ ವ್ಯವಸ್ಥಿತವಾಗಿ ದಾಳಿ ನಡೆದಿದೆ. ಹತ್ತಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಸಿವಿಲ್ ಡ್ರಸ್ ನಲ್ಲಿ ಬಂದು ಲಂಚ ಪಡೆಯುವಾಗಲೇ ಪ್ರಶಾಂತ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here