ಬೆಳಗಾವಿ : ವಿಶೇಷಚೇತನ ಮಕ್ಕಳೆಂದರೆ ದೇವರ ಮಕ್ಕಳು, ಕರುಣಾಮಯಿಗಳು, ನಿಮ್ಮ ಉಜ್ವಲ ಭವಿಷ್ಯಕ್ಕೆ ಸರ್ಕಾರ ಕಂಕಣಬದ್ಧವಾಗಿ ನಿಲ್ಲುತ್ತದೆ. ತಾಯಿಯ ಸ್ಥಾನದಲ್ಲಿ ನಿಂತು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗುದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ವಿಕಲಚೇತನರ ಕ್ರೀಡಾಸ್ಪರ್ಧೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜೊತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬAಧಿಸಿದ ಯಾವುದೇ ಪ್ರಸ್ತಾವಣೆಗಳು ೨೪ ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು ನೀಡಿದ್ದೇನೆ ಎಂದ ಸಚಿವರು, ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಯುವಸಬಲೀಕರ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ವಿಕಲಚೇತನರ ಇಲಾಖೆಯ ಕಲ್ಯಾಣಾಧಿಕಾರಿ ನಾಮದೇವ ಬಿಳ್ಕರ್, ಯುವರಾಜ ಕದಂ, ಶಂಕರಗೌಡ ಪಾಟೀಲ, ವಿಶೇಷ ಚೇತನ ಶಾಲೆಗಳ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.