ತುಮಕೂರು :-ಯಶ್ವಂತಗುರೂಜಿ ಅವರ ಭವಿಷ್ಯ ಮತ್ತೆ ನಿಜವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 65 ಸೀಟು ಗೆಲ್ಲೋದಾಗಿ ಗುರೂಜಿಗಳು ಭವಿಷ್ಯ ನುಡಿದಿದ್ದರು. ಅಲ್ಲದೇ ರೇವಂತ್ ರೆಡ್ಡಿ ತೆಲಂಗಾಣದ ಸಿಎಂ ಆಗೋದಾಗಿಯೂ ಭವಿಷ್ಯ ನುಡಿದಿದ್ದರು.
Advertisement
ಇದೀಗ ಮತ್ತೊಮ್ಮೆ ಯಶ್ವಂತ ಗುರೂಜಿಯ ಕಾಲಜ್ಞಾನ ಭವಿಷ್ಯ ನಿಜವಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಮೂಲದ ಯಶ್ವಂತ ಗುರೂಜಿ ಅವರು, ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ 135 ಸೀಟು ಗೆದ್ದು ಅಧಿಕಾರ ಹಿಡಿಯೋದಾಗಿ ಭವಿಷ್ಯ ನುಡಿದಿದ್ದರು.
ಅದರಂತೆ ತೆಲಂಗಣದ ರಾಜಕಾರಣ ವಿಚಾರದಲ್ಲೂ ಭವಿಷ್ಯ ನುಡಿದಿದ್ದರು. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.