ಚಿತ್ರದುರ್ಗ:- ತಾಳಿ ಕಟ್ಟುವ ಶುಭ ವೇಳೆ ಮದುವೆ ಬೇಡ ಎಂದ ವಧು ಎದ್ದು ಹೊರಟ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಜರುಗಿದೆ.ಕಂಕಣ ಭಾಗ್ಯವನ್ನು ಬಲಗೈಯ್ಯಲ್ಲಿ ವಧು ಧೂಡಿದ್ದಾಳೆ. ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ್ದಾಳೆ. ಮದುವೆ ಮನೆಯಲ್ಲೇ ತಾಳಿ ಕಟ್ಟಿಸಿಕೊಳ್ಳೋಕೆ ನಿರಾಕರಣೆ ಮಾಡಿದ್ದಾಳೆ.
ಪೋಷಕರು ಎಷ್ಟೇ ಹೇಳಿದ್ರೂ ವಧು ತಾಳಿ ಕಟ್ಟಿಸಿಕೊಳ್ಳಲಿಲ್ಲ. ನಾನಿನ್ನೂ ಓದಬೇಕು ಎಂದು ಕಾರಣ ನೀಡಿದ್ದಾಳೆ.ವಧು ಒಪ್ಪದ ಹಿನ್ನೆಲೆ ಮದುವೆ ಮುರಿದು ಬಿದ್ದಿದೆ. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಘಟನೆ ಜರುಗಿದೆ. ಆರತಕ್ಷತೆಯ ವೇಳೆ ಚೆನ್ನಾಗಿಯೇ ವಧು-ವರ ಇದ್ದರು.
ಆದರೆ ಮದುವೆ ದಿನ ತಾಳಿ ಕಟ್ಟಿಸಿಕೊಳ್ಳೋಕೆ ವಧು ಯಮುನಾ ಜಿ.ಎಂ. ನಿರಾಕರಿಸಿದ್ದಾರೆ.ಚಿಕ್ಕಬ್ಯಾಲದಕೆರೆಯ ಸಂತೋಷ ಸಿ.ಎಲ್, ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರಡ್ಟಿಹಳ್ಳಿಯ ಯಮುನಾ ಜಿ.ಎಂ ಮದುವೆ ಚಿಕ್ಕಬ್ಯಾಲದಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. 6ನೇ ತಾರೀಕು ನಡೆದಿದ್ದ ಆರತಕ್ಷತೆ, 7 ನೇ ತಾರೀಕು ನಡೆಯಬೇಕಿದ್ದ ವಿವಾಹ. ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಣೆ ವಿವಾಹ ಮುರಿದು ಬಿದ್ದಿದೆ.