ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು: ಪತಿ ಆತ್ಮಹತ್ಯೆ

0
Spread the love

ಹುಬ್ಬಳ್ಳಿ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಳೆಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

Advertisement

ಸಾಹಿಸ್ತಾ ಬೇಪಾರಿ (25) ಕೊಲೆಯಾದ ಮಹಿಳೆ, ಪತಿ ಮಲ್ಲಿಕ್ ಬೇಪಾರಿ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ‘ಹಳೇಹುಬ್ಬಳ್ಳಿ ನಿವಾಸಿಯಾಗಿದ್ದ ಸಾಹಿಸ್ತಾ ಅವರನ್ನು ಐದಾರು ವರ್ಷಗಳ ಹಿಂದೆ ಬೈಲಹೊಂಗಲ ವ್ಯಕ್ತಿಯೊಬ್ಬರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಕೆಲ ತಿಂಗಳ ಹಿಂದೆ ಪತಿ ಮೃತಪಟ್ಟಿದ್ದರು.

ಇಬ್ಬರು ಮಕ್ಕಳ ಜೊತೆ ಅವರು ತವರಿಗೆ ಬಂದು ವಾಸಿಸುತ್ತಿದ್ದರು. ಕುಟುಂಬದವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕ್ ಬೇಪಾರಿ ಜೊತೆ ಎರಡನೇ ಮದುವೆ ಮಾಡಿಸಿದ್ದರು. ಪತಿ ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.

ಶುಕ್ರವಾರ ಬೆಳಿಗ್ಗೆ ಅದೇ ವಿಷಯಕ್ಕೆ ಮತ್ತೆ ಜಗಳವಾಗಿದ್ದು, ಮಲ್ಲಿಕ್ ಕೋಪದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here