ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ. ಬಿಜೆಪಿ ಮೈತ್ರಿಯಿಂದ ಅಶೋಕ್, ಯಡಿಯೂರಪ್ಪ ಮಗನ ಹಿಂದೆ ನೀವು ಓಡಾಡ್ಬೇಕು ಅಷ್ಟೇ ಎಂದು ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ನೀವು ಕೇಶವ ಕೃಪದಲ್ಲಿ ಬಾಳಲಾರಿರಿ. ನೀವು ಏನು, ನಿಮ್ಮ ಮನಸ್ಥಿತಿ ಏನು ಅನ್ನೋದು ನನಗೆ ಗೊತ್ತಿದೆ. ಮತ್ತೆ ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿಯಿಲ್ಲ ಎಂದು ಕಾಲೆಳೆದಿದ್ದಾರೆ.
ದೇವೇಗೌಡರಿಗೆ ವಯಸ್ಸಾಗಿದೆ, ಸ್ವಯಂ ನಿರ್ಧಾರ ತೆಗೆದುಕೊಳ್ಳಲಾರರು. ಐವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಜನವರಿ ನಂತರ ಒಂದು ಅಂತಿಮ ತೀರ್ಮಾನ ತಿಳಿಸುತ್ತೇವೆ. ದೇವೆಗೌಡರು, ಕುಮಾರಸ್ವಾಮಿಯವರ ಆರೋಗ್ಯದ ದೃಷ್ಠಿಯಿಂದ ನಾನು ಕೆಲಸ ನಿಧಾನಕ್ಕೆ ಮಾಡುತ್ತಿದ್ದೇನೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ಕೆಲಸ ನಿಧಾನ ಮಾಡಿದ್ದೇನೆ ಎಂದರು.