ಬಿಗ್ ಬಾಸ್ ಮನೆಯಲ್ಲಿ ಕಳ್ಳಾಟ ಅಡಿದವರಿಗೆ ಶಾಕ್ ಕೊಟ್ರೂ ಕಿಚ್ಚ: ಇನ್ಮುಂದೆ ಮನೆಗಿಲ್ಲ ಕ್ಯಾಪ್ಟನ್

0
Spread the love

ಕಿಚ್ಚ ಸುದೀಪ್ ಅವರು, ಬಿಗ್ ಬಾಸ್ ಮನೆಯಲ್ಲಿ ಕಳ್ಳಾಟ ಆಡಿದವರಿಗೆ ಶಾಕ್ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ಆಟವನ್ನು ನ್ಯಾಯವಾಗಿ ಗೆಲ್ಲಲಿಲ್ಲ. ವರ್ತೂರು ಸಂತೋಷ್ ಹಾಗೂ ಮೈಕಲ್​ಗೆ ವಿನಯ್ ಸಹಾಯ ಮಾಡಿದರು. ಕುರ್ಚಿಯ ಮೇಲೆ ಕೂತ ವರ್ತೂರ್ ಸಂತೋಷ್ ಗೆ ಹೊರಗಡೆಯಿಂದ ಸಮಯ ಎಣಿಸಿ ವಿನಯ್ ಗೌಡ, ವರ್ತೂರು ಸಂತೋಷ್ ಹಾಗೂ ಮೈಕಲ್ ಇಬ್ಬರಿಗೂ ಸಿಗ್ನಲ್ ಕೊಟ್ಟಿದ್ರು.

Advertisement

ಇಬ್ಬರು ಸೇರಿ ಮೋಸದ ಆಟ ಆಡಿದ್ದಕ್ಕೆ ಸಿಟ್ಟಾದ ಸುದೀಪ್ ವರ್ತೂರ್ ಅವರನ್ನು ಪ್ರಶ್ನೆ ಮಾಡಿದ್ರು. ನೀವು ನ್ಯಾಯವಾಗಿ ಟಾಸ್ಕ್ ಗೆದ್ದರ ವರ್ತೂರು ಎಂದು ಸುದೀಪ್ ಪ್ರಶ್ನೆ ಮಾಡಿದ್ರು, ವರ್ತೂರು ಸಂತೋಷ್ ಸೈಲೆಂಟ್ ಆದ್ರು. ಇದಕ್ಕೆ ಉತ್ತರಿಸಿದ ನಮ್ರತಾ ಗೌಡ, ವಿನಯ್ ಹೊರಗಿನಿಂದ ಕೌಂಟ್ ಮಾಡಿ ವರ್ತೂರು ಸಂತೋಷ್ಗೆ ಸಿಗ್ನಲ್ ಕೊಟ್ರು ಎಂಬ ಸತ್ಯವನ್ನು ನಮ್ರತಾ ಬಾಯ್ಬಿಟ್ಟಿದ್ದಾರೆ.

ಈ ವಾರ ವರ್ತೂರು ಸಂತೋಷ್ ಗೆ ಇಮ್ಯುನಿಟಿ ಇರೋದಿಲ್ಲ ಎಂದಿರುವ ಸುದೀಪ್, ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮ್ಗೆ ಬೀಗ ಹಾಕಿಸಿದ್ದಾರೆ. ಮನೆಯವರಿಗೆ ಕ್ಯಾಪ್ಟನ್ ಮಹತ್ವ ತಿಳಿಯುವವರೆಗೂ ಮನೆಗೆ ಕ್ಯಾಪ್ಟನ್ ಇರೋದಿಲ್ಲ ಎಂದು ಸುದೀಪ್ ಹೇಳಿದ್ರು. ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್​ ಯಾವ ರೀತಿ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ತಾರೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ.

ಸುದೀಪ್ ಕೂಡ ಖಡಕ್ ಮಾತುಗಳಿಂದ ಗಮನಸೆಳೆದಿದ್ದಾರೆ.ಈ ವಾರದ ಕಳಪೆಯನ್ನು ಕಾರ್ತಿಕ್ ಮಹೇಶ್ಗೆ ನೀಡಿದ್ದರು. ಉತ್ತಮ ನಿರ್ವಹಣೆ ತೋರಿದ್ದರೂ, ಕಾರ್ತಿಕ್ಗೆ ಕಳಪೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆಯನ್ನು ಕಾರ್ತಿಕ್​ಗೆ ನೀಡಿದ್ದಾರೆ ಎನ್ನಲಾಗ್ತಿದೆ.


Spread the love

LEAVE A REPLY

Please enter your comment!
Please enter your name here