ಇಂಥಾ ಕಳ್ಳರು ಇರ್ತಾರಾ!? ತಂದಿದ್ದು ಗೂಡ್ಸ್ ವಾಹನ, ಕದ್ದಿದ್ದು ಟಾರ್ಪಲ್

0
Spread the love

ಬೆಂಗಳೂರು: ಈತ ವಿಚಿತ್ರದಲ್ಲಿ ವಿಚಿತ್ರ ಕಳ್ಳ, ಬಂದಿದ್ದು ಗೂಡ್ಸ್ ಆಟೋದಲ್ಲಿ ಕದ್ದಿದ್ದು ಮಾತ್ರ ಟಾರ್ಪಲ್..

Advertisement

ಹೌದು, ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಕಳ್ಳನೊಬ್ಬ ಇದ್ದಾನೆ. ಲೋಡ್ ಗಟ್ಟಲೇ ಸಿಮೆಂಟ್ ಬಿಟ್ಪ ಸಿಮೆಂಟ್ ಗೆ ಮುಚ್ಚಿದ್ದ ಟಾರ್ಪಲ್ ಮಾತ್ರ ಕದ್ದು ಕಳ್ಳ ಎಸ್ಕೇಪ್ ಆಗಿರುವ ಘಟನೆ ಜರುಗಿದೆ.

ಗೂಡ್ಸ್ ಆಟೋದಲ್ಲಿ ಬಂದು ಖದೀಮ ಟಾರ್ಪಲ್ ಕದ್ದಿದ್ದ. ಟಾರ್ಪಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ದ ಟಾರ್ಪಲ್ ನಲ್ಲೇ ಗಾಡಿ ನಂಬರ್ ಫ್ಲೇಟ್ ಕಾಣದಂತೆ ಮುಚ್ಚಿ ಎಸ್ಕೇಪ್ ಆಗಿದ್ದಾನೆ. ಫಿಕಪ್ ನಲ್ಲಿ ಸಿಮೆಂಟ್ ಲೋಡ್ ಗೆ ಮುಚ್ಚಿದ್ದ ಟಾರ್ಪಲ್ ಕಳವಾಗಿದೆ.

19 ಸಾವಿರ ರೂಪಾಯಿ ಟಾರ್ಪಲ್ ಕದ್ದು ಕಳ್ಳ ಎಸ್ಕೇಪ್ ಆಗಿದ್ದಾನೆ. ನಾಗರಬಾವಿಯ ಮಾಳಗಾಳದಲ್ಲಿ ನಡೆದಿರುವ ಕಳ್ಳತನ ಎನ್ನಲಾಗಿದೆ. ಗೂಡ್ಸ್ ಆಟೋದಲ್ಲಿ ಬಂದ್ರೂ ಕಳ್ಳ ಮಾತ್ರ ಒಂದು ಮೂಟೆ ಸಿಮೆಂಟ್ ಕದ್ದಿಲ್ಲ.

ಸಿಮೆಂಟ್ ಲೋಡ್ ಮಾಡಿ ಮಾಲೀಕ ಪಿಕಫ್ ನಲ್ಲಿಟ್ಟಿದ್ದ. ಬೆಳಗ್ಗೆ ಕಸ್ಟಮರ್ ಗೆ ಡೆಲಿವರಿ ಕೊಡೊದಕ್ಕೆ ಅಂತಾ ಲೋಡ್ ಮಾಡಿಟ್ಟಿದ್ದ. ರಾತ್ರಿ 1 ಗಂಟೆ ಸುಮಾರಿಗೆ ಬಂದು ಟಾರ್ಪಲ್ ಮಾತ್ರ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here