ಗದಗ: ಗದಗ ನಗರದ 31 ನೇ ವಾರ್ಡ್ ನಿವಾಸಿಗಳಿಂದ ಶೌಚಾಲಯಕ್ಕೆ ಆಗ್ರಹಿಸಿ ಬಕೆಟ್, ಚಂಬು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು.
Advertisement
1ನೇ ನಂಬರ್ ಶಾಲೆಯ ಹತ್ತಿರ ಇರುವ ಸಾರ್ವಜನಿಕ ಶೌಚಾಲಯ ದುರಸ್ಥಿಗೊಳಿಸುವಂತೆ ಆಗ್ರಹಿಸಿದ್ದಾರೆ. ವಾರ್ಡ್ ಮೆಂಬರ್‌ಗೆ ಹೇಳಿದ್ರೂ ಕ್ಯಾರೆ ಅಂತಿಲ್ಲ, ಮಹಿಳೆಯರು, ಮಕ್ಕಳಿಗೆ ತೊಂದರೆಯಾಗಿದೆ. ಕಲುಷಿತ ನೀರು ನಿಂತಿದ್ರಿಂದಾಗಿ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ ಎಂದು ಅಳಲು ತೊಡಿಕೊಂಡರು.