ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅದಾಗಲೇ ಸಿಲಿಕಾನ್ ಸಿಟಿಯನ್ನು ನಶೆಯಲ್ಲಿ ತೇಲಿಸೋಕ್ಕೆ ಗ್ಯಾಂಗ್ ರೆಡಿಯಾಗಿತ್ತು. ಆದ್ರೆ ಪಕ್ಕಾ ಮಾಹಿತಿ ಕಲೆ ಹಾಕಿದ್ದ ಸಿಸಿಬಿ .ಹೊಸ ವರ್ಷಕ್ಕೆ ಡ್ರಗ್ಸ್ ಸರಬರಾಜಗೆ ಬ್ರೇಕ್ ಹಾಕಿದೆ. ಪ್ರತಿವರ್ಷದಂತೆ ಈ ವರ್ಷವು ನಗರದಲ್ಲಿ ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ಮೇಲೆ ಸಿಸಿಬಿ ನಿಗಾ ಇಟ್ಟಿದೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ನಗರದಲ್ಲಿ ಹೊಸ ವರ್ಷಕ್ಕೆ ರೆಸ್ಟೋರೆಂಟ್ ಹೊಟೇಲ್ ಪಾರ್ಟಿ, ರೇವಾ ಪಾರ್ಟಿಗಳಿಗೆ ಸರಬರಾಜು ಮಾಡೋದಿಕ್ಕೆ ಇಟ್ಟಿದ್ದ 21 ಕೋಟಿ ಮೌಲ್ಯದ ಎಮ್ ಡಿ ಎಮ್ ಎ ಕಿಸ್ಟ್ರಲ್, ಹಾಗು 500 ಗ್ರಾಂ ಕೋಕೇನ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಫ್ರಿಕಾ ಪ್ರಜೆ ಲಿಯೋನಾರ್ಡ್ ಒಕ್ವಿಡಿಲಿ ಎಂಬಾತ ಡ್ರಗ್ಸ್ ಸ್ಟಾಕ್ ಮಾಡಿಟ್ಟಿಕೊಂಡಿದ್ದ. ಸಿಸಿಬಿ ದಾಳಿ ನಡೆಸಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.