ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ಮಹಿಳೆ ಕುಟುಂಬದ ಮೇಲೆ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದಾರೆ.. ಇಂಥೊಂದು ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರು ಗ್ರಾಮದಲ್ಲಿ .
ಇನ್ನೂ ಹೀಗೆ ಹಲ್ಲೆಗೊಳಗಾಗಿದ್ದ ಮಹಿಳೆ ಹೆಸರು ರಾಮಕ್ಕ ಅಂತ . ಇನ್ನು ಮುಗಳೂರು ಗ್ರಾಮದ ನಿವಾಸಿ ಸೀನಪ್ಪ ಎಂಬಾತನನ್ನು ಮದುವೆಯಾಗಿ 20 ವರ್ಷ ಅಗಿತ್ತು. ಇವರ ಸಂಬಂದಕ್ಕೆ ಇಬ್ಬರು ಹೆಣ್ಣುಮಕ್ಕಳು ಸಹ ಇದ್ರು. ಗಂಡ ಸಿನಪ್ಪ ಮೇಕೆ ಮೆಯಿಸ್ಕೊಂಡು ಜೀವನ ಸಾಗಿಸುತ್ತಿದ್ದರು.
ಕೆಲ ವರ್ಷಗಳ ಹಿಂದೆ ಮೇಕೆಗೆ ಮೇವು ತರಲು ಹೋಗಿ ಕಾಲು ಮುರಿಕೊಂಡು ಅಂಗವಿಕಲರಾಗಿದ್ದರು. ಇನ್ನು ಮಗಳು ಕೂಡ ಹಾರ್ಟ್ ಪೇಷಂಟ್.
ಹೀಗಿರುವಾಗ ಇದೇ ನೆರೆಹೊರೆಯ ಕುಟುಂಬ ಶಿಲ್ಪ ಮತ್ತು ವೆಂಕಟೇಶ್ ಹಾಗೂ ಶೈಲಜ ಚನ್ನಕೇಶವ ಕಿಶನ್ ಕುಟುಂಬ ವೀಣಾ ನಾಗೇಶ ಬಾಬು ಕುಟುುಂಬ ನಮಗೆ ಓಡಾಡಲು ಜಾಗ ಬಿಡುವಂತೆ ರಾಮಕ್ಕಗೆ ಧಮ್ಕಿ ಹಾಕಿದ್ದಾರೆ.
ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಸಹ ಹಾಕಿದ್ದಾರೆ..ಇನ್ನು ಸರ್ವೆ ನಂಬರ್ 135/135/3 ರಲ್ಲಿ ರಾಮಕ್ಕ ಭಾಗಕ್ಕೆ ಸೇರಿದ 5 ಗುಂಟೆ ಜಾಗ ಇತ್ತು. ಆದರೆ ಈಗ ಓಡಾಡಲು ದಾರಿ ಬಿಡುವಂತೆ ಇದು ಸರ್ಕಾರಿ ಜಾಗ ಅಂತ ಕ್ಯಾತೆ ತೆಗೆದು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.