ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಯ್ತು ಸೈಬರ್ ಬುಲ್ಲಿಂಗ್: ಹೆಚ್ಚು ಮೊಬೈಲ್ ಬಳಕೆ ಕಾರಣ ಎಂದ ತಜ್ಞರು

0
Spread the love

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಬುಲ್ಲಿಂಗ್ ಹಾವಳಿ ಹೆಚ್ಚಾಗಿದೆ. ತಂತ್ರಜ್ಞಾನವನ್ನು ಬಳಸಿ ಸೆಲೆಬ್ರಿಟಿಗಳ ಫೋಟೋಗಳನ್ನು ಎಡಿಟ್‌ ಮಾಡಿ ವೈರಲ್‌ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಡೀಪ್‌ಫೇಕ್ ತಂತ್ರಜ್ಞಾನದಿಂದ ಎಡಿಟ್‌ ಮಾಡಿದ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಮತ್ತು ಕತ್ರಿನಾ ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಈಗ ಇದೇ ರೀತಿಯ ಕೇಸ್​ಗಳು ಮಕ್ಕಳ ಹಕ್ಕುಗಳ ಸಂಸ್ಥೆಗೆ ಹೆಚ್ಚಾಗಿ ಕೇಳಿ ಬರ್ತಿವೆ.ರಾಜಧಾನಿಯ ಚಾಮರಾಜಪೇಟೆಯ ಖಾಸಗಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಜಗಳವಾಡಿ ಕೋಪದಲ್ಲಿ ತನ್ನ ಸ್ನೇಹಿತನ ಫೋಟೋ ಮಾರ್ಪ್ ಮಾಡಿ ಬುಲ್ಲಿಂಗ್ ಮಾಡಿದ್ದ ಎಂಬ ಬಗ್ಗೆ ದೂರು ಕೇಳಿ ಬಂದಿತ್ತು.

Advertisement

ಬಳಿಕ ಇತಂಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳು ಈಗ ಇತಂಹ ಸಾಮಾಜಿಕ ಜಾಲತಾಣಗಳ ಗೀಳಿನಿಂದ ತಂತ್ರಜ್ಞಾನದ ಬಳಕೆಯಿಂದ ಅಡ್ಡ ಹಾದಿ ಹಿಡಿದಿದ್ದಾರೆ. ಇನ್ನು ಕೆಲವು ವಿಧ್ಯಾರ್ಥಿಗಳು ಫೇಸ್ ಬುಕ್, ಇನ್ಸಾಟಾಗ್ರಾಮ್, ಟ್ವೀಟರ್ ಗಳಲ್ಲಿ ವಯೋಮಿತಿ ಸುಳ್ಳು ಮಾಹಿತಿ ನೀಡಿ ಬಳಕೆ ಮಾಡುತ್ತಿದ್ದು ಇಷ್ಟವಾಗದ ಸಹಪಾಠಿಗಳನ್ನ ಅಥವಾ ಜಗಳವಾಡಿದ ಸ್ನೇಹಿತರ ಪೋಟೋಗಳನ್ನ ಕೆಟ್ಟದಾಗಿ ಮಾರ್ಪ್ ಮಾಡುವುದು ಸೈಬರ್ ಬುಲ್ಲಿಂಗ್ ಮಾಡುವುದೆಲ್ಲ ಕಂಡು ಬರ್ತಿದೆ. ಹೀಗಾಗಿ ಮಕ್ಕಳ ಹಕ್ಕುಗಳ ಸಂಸ್ಥೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಮುಂದಾಗಿದೆ. ಶಾಲಾ ಮಕ್ಕಳ ಸಾಮಾಜಿಕ ಬಳಕೆಯ ನಿಯಂತ್ರಣಕ್ಕೆ ಒತ್ತಾಯ ಮಾಡಲು ಮುಂದಾಗಿದೆ.

ಇನ್ನು ಶಾಲಾ ಮಕ್ಕಳ ಈ ಮನಸ್ಥಿತಿ ಪೋಷಕರೇ ಶಾಕ್ ಆಗೋವಂತೆ ಮಾಡ್ತೀದೆ. ಕಳೆದ ಕೆಲವು ದಿನಗಳ ಹಿಂದೆ ಶಾಲೆಯಲ್ಲಿ ಮಕ್ಕಳ ಬ್ಯಾಗ್ ನಲ್ಲಿ ಪತ್ತೆಯಾದ ಕಾಂಡೋಮ್, ಗರ್ಭ‌ನಿರೋಧಕ ಮಾತ್ರೆಗಳು ಭಾರೀ ಸುದ್ದಿಯಾಗಿತ್ತು. ಇದೀಗ ಸೈಬರ್ ಬುಲ್ಲಿಂಗ್ ಶುರುವಾಗಿದೆ. ತಂತ್ರಜ್ಞಾನಗಳನ್ನ ಬಳಕೆ ಮಾಡಿಕೊಂಡು ತಮಗೆ ಇಷ್ಟವಾಗದವರನ್ನ ಕೆಟ್ಟದಾಗಿ ಮಾರ್ಫ್ ಮಾಡಿ ಜಾಲತಾಣಗಳಿಗೆ ಶೇರ್ ಮಾಡ್ತೀದ್ದಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವಕ್ಕೆ ಕಾರಣವಾಗುತ್ತಿದೆ. ಇಷ್ಟಕ್ಕೆಲ್ಲ ಮಕ್ಕಳಿಗೆ ಸುಲಭವಾಗಿ ಸಿಗುತ್ತಿರುವ ತಂತ್ರಜ್ಞಾನ ಹಾಗೂ ಜ್ಞಾನ ಕಾರಣವಾಗ್ತಿದೆ. ಮಕ್ಕಳಲ್ಲಿ ನೈತಿಕ ಪಾಠ ಮರೆಯಾಗ್ತೀದೆ.

ಮಕ್ಕಳಿಗೆ ಗೌರವ ಮನೋಭಾವ ಕಲಿಸುವ ಅಂಶಗಳು ಕಡಿಮೆಯಾಗಿದೆ. ಜೊತೆಗೆ ಸಿನಿಮಾ ಮಾಧ್ಯಮ ಹಾಗೂ ಪೋಷಕರ ನಿಗಾವಹಿಸದಿರುವುದೆಲ್ಲ ಇಷ್ಟಕ್ಕೆ ಕಾರಣವಾಗ್ತಿದೆ ಎಂದು ಚೈಲ್ಡ್ ಸೈಕಾಲಜಿಸ್ಟ್ ಮಾನ್ವೀತಾ ತಿಳಿಸಿದ್ದಾರೆ. ಒಟ್ನಲ್ಲಿ ಇತ್ತೀಚಿನ ಮಕ್ಕಳು ಅತಿಯಾದ ಮೊಬೈಲ್ ಬಳಕೆ, ಸುಲಭಕ್ಕೆ ಸಿಗುತ್ತಿರುವ ತಂತ್ರಜ್ಞಾನ ಎಷ್ಟು ವರವಾಗುತ್ತಿದೆಯೋ ಅಷ್ಟೇ ಶಾಪಕ್ಕೂ ಕಾರಣವಾಗ್ತಿದೆ. ಅನೇಕ ಮಕ್ಕಳು ತಿಳುವಳಿಕೆ ಇಲ್ಲದೆ ಇತಂಹ ಹೊಸ ಸೈಬರ್ ಬುಲ್ಲಿಂಗ್ ಹಾವಳಿಗೆ ಬಲಿಯಾಗ್ತೀದ್ದಾರೆ. ಇನ್ನಾದ್ರೂ ಪೋಷಕರು ಕೊಂಚ ಮಕ್ಕಳ ಬಗ್ಗೆ ಗಮನಹರಿಸಬೇಕಿದೆ.


Spread the love

LEAVE A REPLY

Please enter your comment!
Please enter your name here