ತುಮಕೂರು:- ದ್ವಿಚಕ್ರ ವಾಹನ ಚಲಾಯಿಸಿದ ಸವಾರರಿಗೆ 8 ಸಾವಿರ ದಂಡವನ್ನು ಸಂಚಾರಿ ಪೊಲೀಸರು ವಿಧಿಸಿದ್ದಾರೆ. ಗಿರಿನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಓಡಿಸುತ್ತಿದ್ದರು. ಈ ವಿಷಯ ಕ್ಯಾತ್ಸಂದ್ರ ಪೊಲೀಸರ ಗಮನಕ್ಕೆ ಬಂದಿದ್ದು, ಬೈಕ್ ವಶಕ್ಕೆ ಪಡೆದು ಸೈಲೆನ್ಸರ್ ಕಿತ್ತು ಹಾಕಿ ದಂಡ ವಿಧಿಸಲಾಗಿದೆ.
Advertisement
ನಗರ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವುದು ಮತ್ತು ಕರ್ಕಶ ಶಬ್ದದೊಂದಿಗೆ ವಾಹನ ಚಲಾಯಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಇದೀಗ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.