ರಾಜ್ಯದಲ್ಲಿ ಕೊರೊನಾ ವೈರಸ್’ನಿಂದ ವ್ಯಕ್ತಿ ಸಾವು: ದಿನೇಶ್ ಗುಂಡೂರಾವ್

0
Spread the love

ಬೆಂಗಳೂರು: ಐದು ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್‍ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ನಿವಾಸಿಗೆ ಕೊರೊನಾ ಜೊತೆ ಅನ್ಯ ಕಾಯಿಲೆಗಳು ಕೂಡ ಇದ್ದವು. ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.

Advertisement

ಈ ನಡುವೆ ಕೊರೊನಾ ಪಾಸಿಟಿವ್ ಕೂಡ ಆಗಿತ್ತು. ಇವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಮೂರು ತಿಂಗಳಿಂದ ಇದು ಹೆಚ್ಚಾಗಿದೆ. ಆಗಸ್ಟ್ ನಲ್ಲಿ ಈ ಉಪತಳಿ ಕಾಣಿಸಿಕೊಂಡಿದೆ. ವೇಗವಾಗಿ ಹಬ್ಬುವ ವೈರಾಣು ಇದಾಗಿದ್ದು, ಒಮಿಕ್ರಾನ್ ರೀತಿಯಲ್ಲಿ ವರ್ತನೆ ಇದೆ. ತೀರಾ ಹಾನಿಕಾರಿ ವೈರಾಣು ಅಲ್ಲ. ದೇಶದಲ್ಲಿ 20 ಪ್ರಕರಣ ಇದೆ ಎಂದರು


Spread the love

LEAVE A REPLY

Please enter your comment!
Please enter your name here