ಮನೆ ಕಟ್ಟಿಯಾಯ್ತು, ನೋಡಬನ್ನಿ

post advertise banner
Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ಗಾಯತ್ರಿ ಕ್ರಿಯೇಷನ್ಸ್ ಬೆಂಗಳೂರು ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕಲಾತ್ಮಕ ಕನ್ನಡ ಚಿತ್ರ ’ಮನೆ’ ಚಿತ್ರೀಕರಣ ಮುಕ್ತಾಯಗೊಂಡಿದೆ.


ಉತ್ತರ ಕರ್ನಾಟಕದ ಹುಬ್ಬಳ್ಳಿ, ಶಿರಗುಪ್ಪಿ, ನಲವಡಿ ಗ್ರಾಮಗಳ ಸುತ್ತಮುತ್ತ ಹತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದ್ದು, ಇದು ಕಲಾತ್ಮಕ ಚಿತ್ರವಾಗಿದ್ದು ಕೌಟುಂಬಿಕ ಕಥಾ ಹಂದರವನ್ನು ಹೊಂದಿದೆ. ಸಿದ್ದಪ್ಪ ಒಬ್ಬ ಕೂಲಿ ಕಾರ್ಮಿಕ, ಆತನಿಗೆ ತನ್ನದೇ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಹೇಗೆ ಮನೆ ನಿರ್ಮಾಣ ಮಾಡುತ್ತಾನೆ? ಮಗ ಸೊಸೆಯರಿಗಾಗಿ ಸಿದ್ದಪ್ಪ ತೆಗೆದುಕೊಳ್ಳುವ ತೀರ್ಮಾನ, ಊರ ಗೌಡರು ಸಿದ್ದಪ್ಪನಿಗೆ ಮಾಡುವ ಸಹಾಯ ಕುತೂಹಲ ಮೂಡಿಸುತ್ತದೆ.


ಇದೀಗ ಚಿತ್ರ ತಂಡವು ಸಂಕಲನ ಕಾರ್ಯಕ್ಕೆ ತೊಡಗಲಿದ್ದು ಡಿಸೆಂಬರ್ ವೇಳೆಗೆ ತೆರೆಗೆ ತರಲಾಗುತ್ತದೆ. ತಾರಾಗಣದಲ್ಲಿ ರೇಣುಕುಮಾರ ಸಂಸ್ಥಾನಮಠ, ಪ್ರಮೀಳ ಸುಬ್ರಹ್ಮಣ್ಯ, ಸಾಗರ್ ಕೆ.ಎಚ್, ಅಕ್ಷತಾ ವಿಲಾಸ್, ಮಂಜುನಾಥ ಪಾಟೀಲ, ವಿದ್ಯಾ ಪ್ರಭು ಗಂಜಿಹಾಳ, ಅವಿನಾಶ ಪಿಜಿ ಮೊದಲಾದವರು ಅಭಿನಯಿಸಿದ್ದಾರೆ.

ಸಂಗೀತ ಶಿವಸತ್ಯ, ಛಾಯಾಗ್ರಹಣ ವಿನಾಯಕ ರೇವಡಿ, ಚಿತ್ರಕಥೆ, ಸಂಕಲನ ಟಿ. ಮುತ್ತುರಾಜು, ಕಥೆ ಮತ್ತು ನಿರ್ಮಾಪಕರು ಟಿ.ಎಸ್.ಕುಮಾರ, ಸಾಹಿತ್ಯ ಸಹನಿರ್ದೇಶನ ಸತೀಶ್ ಜೋಶಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಈ ಹಿಂದೆ ಶ್ರೀ ಕಬ್ಬಾಳಮ್ಮ ಮಹಿಮೆ ಪೌರಾಣಿಕ ಸಿನಿಮಾ ನಿರ್ದೇಶನ ಮಾಡಿದ್ದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಹೊಣೆ ಹೊತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.