ಗಜೇಂದ್ರಗಡದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ; ವಾಹನ ಸಮೇತ ಇಬ್ಬರ ಬಂಧನ

0
Spread the love

ಗಜೇಂದ್ರಗಡ: ಸರಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಇಬ್ಬರನ್ನು ಬಂಧಿಸಲಾಗಿದೆ.

Advertisement

ಗಜೇಂದ್ರಗಡ ಪಟ್ಟಣದ ರೋಣ ರಸ್ತೆಯ ಗೋ ಶಾಲೆಯ ಮುಂದೆ ಟಾಟಾ ಕಂಪನಿಯ ಗೂಡ್ಸ್ ka26-b-3513 ನಂಬರಿನ ವಾಹನದಲ್ಲಿ ಗೊಲ್ಲರ ಓಣಿಯ ದೇವಪ್ಪ ದುರಗಪ್ಪ ಬಣ್ಣದ ಹಾಗೂ ವಾಹನ ಚಾಲಕ ಲಮಾಣಿ ತಾಂಡಾದ ಭೀಮಾ ಅಲಿಯಾಸ್ ಪ್ರೇಮ್ ಗೋಪಾಲ್ ರಾಠೋಡ್ ಇಬ್ಬರು ಸೇರಿಕೊಂಡು ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯನ್ನು
ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.

ಐದು ಲಕ್ಷ ರೂ. ಮೌಲ್ಯದ ಟಾಟಾ ಗೂಡ್ಸ್ ವಾಹನ ಹಾಗೂ 33ಸಾವಿರದ 600ರೂಗಳ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.

ಅಧಿಕಾರಿ ಮಂಜುನಾಥ್ ತಾಯಪ್ಪ ತಳ್ಳಿಹಾಳ ಗಜೇಂದ್ರಗಡ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ.

ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 004/2024- ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here