HomeEducation`ಪುಷ್ಠಿ' ಸಮತೋಲಿತ ಆಹಾರ

`ಪುಷ್ಠಿ’ ಸಮತೋಲಿತ ಆಹಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಾಲ್ಯದಲ್ಲಿ ಮಕ್ಕಳಿಗೆ ಅಹಾರದ ಕೊರತೆ ಆಗದಂತೆ ಬಲಿಷ್ಠವಾಗಿ ಬೆಳೆಯಲು ಅಂಗನವಾಡಿ ಆಹಾರದಲ್ಲಿ ಪುಷ್ಠಿ ಬಹಳ ಉಪಯುಕ್ತವಾದ ಆಹಾರವಾಗಿದ್ದು, ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಎಲ್ಲಾ ತಾಯಂದಿರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುಲಕೋಟಿ ಗ್ರಾ.ಪಂ ಅಧ್ಯಕ್ಷೆ ನಾಗರತ್ನಾ ಬಾಳಿಹಳ್ಳಿಮಠ ಹೇಳಿದರು.

ಇಲ್ಲಿನ ಹುಲಕೋಟಿಯ ಕೃಷ್ಣಾ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿಯ ಅಡಿಯಲ್ಲಿ ಆಹಾರ ಜಾಗೃತಿ ಸಭೆ ಮತ್ತು ಅಹಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆಯ ಪ್ರಧಾನ ಗುರುಗಳಾದ ಎ.ವಿ. ಪ್ರಭು ಮಾತನಾಡಿ, ಪುಷ್ಠಿ ಸರ್ವ ಸಮತೋಲಿತ ಆಹಾರವಾಗಿದೆ.

ಅದನ್ನು ಎಲ್ಲರೂ ಶಿಶು-ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸರಿಯಾದ ಪ್ರಮಾಣದಲ್ಲಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮಮತಾಜಭಿ ನದಾಫ್, ಅಶ್ವಿನಿ ಕಲಬುರ್ಗಿ, ತನುಜಾ ಕೆಂಪಣ್ಣವರ, ಶೈಲಾ ದೊಡ್ಡಮನಿ, ಲಕ್ಷ್ಮಿ ಕೈಡ್ಯಾರ, ಮೈತ್ಯಂಜಯ ಅಬ್ಬಿಗೇರಿಮಠ, ನಿರ್ಮಲಾ ಹೂವಿನಹಳ್ಳಿ ಮೊದಲಾದವರು ಹಾಜರಿದ್ದರು.

ಅಂಗನವಾಡಿ ಕೇಂದ್ರದ ಶಿಕ್ಷಕಿ ಚಂದ್ರಕಲಾ ದೂದನಕರ ಸ್ವಾಗತಿಸಿ, ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!