HomeGadag Newsಎಸ್‌ಡಿಪಿಐ ಪಕ್ಷವನ್ನು ಸಂಘಟಿಸಿ ಗೆಲ್ಲಿಸೋಣ

ಎಸ್‌ಡಿಪಿಐ ಪಕ್ಷವನ್ನು ಸಂಘಟಿಸಿ ಗೆಲ್ಲಿಸೋಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗದಗ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಫೆ.೨೨ರಂದು ಝಾಕೀರ್ ಹುಸೇನ್ ಕಾಲೋನಿ ಶಾದಿಹಾಲ್ ಮುಳಗುಂದ ನಾಕಾದಲ್ಲಿ ಪಕ್ಷ ಸೇರ್ಪಡೆ ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರ ಸಮಾವೇಶ ನಡೆಯಿತು.

ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ಭಾಗವಹಿಸಿ ಪಸಕ್ತ ರಾಜಕೀಯ ಪಕ್ಷಗಳ ತಾರತಮ್ಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸಮಿತಿ ಸದಸ್ಯರು ಹಾಗೂ ಗದಗ ಜಿಲ್ಲಾ ಪಕ್ಷದ ಉಸ್ತುವಾರಿ ರಮಜಾನ ಕಡಿವಾಲ ಮಾತನಾಡಿ, ಪಕ್ಷವು ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಎಸ್‌ಡಿಪಿಐ ಪಕ್ಷದ ಶಾಸಕರನ್ನು ಗೆಲ್ಲಿಸಲು ಎಲ್ಲರೂ ಪಣತೊಡಬೇಕು ಎಂದು ಹೇಳಿದರು.

ಗದಗ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಯಾಸಿನ್ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಸದಸ್ಯರಾದ ಇಬ್ರಾಹಿಂ ಕಿಲ್ಲೆದಾರ, ಮುಜಾಹಿದ್ ಕಣಕೆಣ್ಣವರ್, ಇರ್ಫಾನ್ ಗುಳಗುಂದಿ, ಅನ್ವರ್ ಮುಲ್ಲಾ, ಮುಸ್ತಾಕ್ ಕಟ್ಟಿಮನಿ ನವೀದ್ ಕಮಾನಗಾರ್, ಸಮೀರ್ ಕೊಟ್ಟರ, ಹಸನ್ ನಾಗನೂರ್, ಖಲೀಲ್ ನಾರಾಯಣಕೆರಿ, ಸದ್ದಾಂ ಚಾಕಲಬ್ಬಿ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ ಸ್ವಾಗತಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!