ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ, ಸಂಸ್ಕೃತಿ-ಜನಪದ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವೀಂದ್ರನಾಥ ಬಿ.ದಂಡಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿನಾಕಾರಣ ಸಮಯವನ್ನು ಕಾಲಹರಣ ಮಾಡದೇ ಓದಿಗೆ ಸಮಯ ಮೀಸಲಿರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿವೃತ್ತ ಶಿಕ್ಷಕ ವ್ಹಿ.ಆರ್. ಹುಯಿಲಗೋಳ ಮಾತನಾಡಿ, ವಿದ್ಯಾರ್ಥಿಗಳು ನಾಳಿನ ನಾಡಿನ ಪ್ರಜ್ಞಾವಂತ ಪ್ರಜೆಗಳು. ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಪ್ರಾಮುಖ್ಯತೆ ನೀಡಿ ವಿದ್ಯಾವಂತರಾಗಿ ಸಮಾಜ ನಿಮ್ಮನ್ನು ಗುರುತಿಸುವಂತಾಗಬೇಕು ಎಂದರು.
ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಸಿದ್ದು ಬಿ.ಯಾಪಲಪರವಿ, ಸುರೇಶ್ ಕಮ್ಮಾರ, ಸಿ.ಕೆ. ಹೊಸಹಳ್ಳಿ, ಮಲ್ಲಪ್ಪ ಇದ್ಲಿ, ಹನುಮವ್ವ ತಳವಾರ, ಅಕ್ಕಮ್ಮ ಹಿರೆಬಸಣ್ಣವರ, ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಅಲ್ಲಿ ಸಾಬ್ ನದಾಫ ಪಾಲ್ಗೊಂಡಿದ್ದರು.
ಸುನೀತಾ ಕೊಪ್ಪದ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ರಾಮಣ್ಣ ಪಿ.ಕುರಡಗಿ ಸ್ವಾಗತಿಸಿದರು. ಜಿ.ಬಿ. ಆಡಕಾಯು ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ರಾಜು ಬಿ.ಚವ್ಹಾಣ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಎಚ್. ಮಲ್ಲಾಪೂರ ನಿರೂಪಿಸಿದರು. ಕೆ.ಎಸ್. ತಳವಾರ ವಂದಿಸಿದರು.


