ಲೋಕಸಭಾ ಚುನಾವಣೆಯವರೆಗೆ ಮಾತ್ರ `ಗ್ಯಾರಂಟಿ’

0
hanumantappa
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕಡಿಮೆ ಅವಧಿಯಲ್ಲಿ ಇಡೀ ರಾಜ್ಯಾದ್ಯಂತ ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಮೂಡಿಸಿದ ಹಾಗೂ ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಭಾಗ್ಯಲಕ್ಷ್ಮಿ ಯೋಜನೆ, ಜಿಲ್ಲಾ/ತಾಲೂಕು ಮಟ್ಟದಲ್ಲಿ ಕ್ರೀಡಾಂಗಣ, ಶಿಕ್ಷಕರ ನೇಮಕಾತಿ, ವಸತಿ ನಿಲಯಗಳ ಸ್ಥಾಪನೆ ಹೀಗೆ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಹೇಳಿದರು.

Advertisement

ಅವರು ಶುಕ್ರವಾರ ಶಿರಹಟ್ಟಿಯ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿರ್ದೆಶನದ ಮೇರೆಗೆ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಜಾರಿಗೊಳಿಸಿದ ಯೋಜನೆಗಳನ್ನು ಜಿಲ್ಲೆ ಹಾಗೂ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷವನ್ನು ಸಂಘಟಿಸುವುದರ ಜೊತೆಗೆ ಈ ಎಲ್ಲ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿಯನ್ನು ವಹಿಸಿದ್ದಾರೆ. ಅದರಂತೆ ಸಂಘಟನೆ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ರಾಜ್ಯ ಸರಕಾರ ಹಳೆಯ ಬಸ್‌ಗಳನ್ನು ಕೊಟ್ಟಿರುವ ಕಾರಣ, ಊರಿಗೆ ಹೋಗುವುದಕ್ಕೂ ಗ್ಯಾರಂಟಿ ಇಲ್ಲದ ಪರಿಸ್ಥಿತಿಯಲ್ಲಿ ಜನತೆ ಇದ್ದಾರೆ. ಶಾಲಾ-ಕಾಲೇಜುಗಳ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಅನೇಕ ತೊಂದರೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ಪುರುಷರು ನಿಮಗೆ ಮತ ಹಾಕಿಲ್ಲವೇ, ಅವರಿಗೂ ಯೋಜನೆಯ ಲಾಭ ಪಡೆದುಕೊಳ್ಳಲು ಆದೇಶ ಮಾಡಿ. ಗೃಹಜ್ಯೋತಿ ಸಮರ್ಪಕವಾಗಿ ಕಾರ್ಯಗತವಾಗಿಲ್ಲ, ನಿರುದ್ಯೋಗಿಗಳಿಗೆ ಮಾಸಾಶನ ನೀಡಿಲ್ಲ, ೧೦ಕೆಜಿ ಅಕ್ಕಿ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಂಸಾಬ ಮುಧೋಳ, ಗುರುರಾಜ ಹುಣಸಿಮರದ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ರಾಜ್ಯವಕ್ತಾರ ವೆಂಕನಗೌಡ ಗೋವಿಂದಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮೇಟಿ, ತಾಲೂಕಾಧ್ಯಕ್ಷ ಶಂಕರಣ್ಣ ಬಾಳಿಕಾಯಿ, ಜಿ.ಎ. ಬುರಡಿ, ಎಂ.ಎಸ್. ಪರ್ವತಗೌಡ್ರ, ಪ್ರಕಾಶ ದೊಡ್ಡಮನಿ, ಲಕ್ಷö್ಮಣ ನಾಯಕ, ದೇವಪ್ಪ ಮಲ್ಲಸಮುದ್ರ, ಪ್ರವೀಣ ಬಾಳಿಕಾಯಿ, ಬಸವರಾಜ ಹರಿಜನ, ಮಂಜುನಾಥ ದೊಡ್ಡಮನಿ, ಜಾಕಿರಹುಸೇನ ಹವಾಲ್ದಾರ, ವಿನಾಯಕ ಪರಬತ, ಫಕ್ಕೀರಪ್ಪ ತುಳಿ, ಬಸವರಾಜ ಅಪ್ಪಣ್ಣವರ, ಹಾಜಿಅಲಿ ಕುಂದ್ರಳ್ಳಿ, ಶರಣಪ್ಪ ಹೂಗಾರ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರಿದ್ದಾರೆ. ಅವರ ಮೇಲೆ ಸಾಕಷ್ಟು ಭರವಸೆಯನ್ನು ಹೊಂದಿದ್ದೆವು. ಆದರೆ ಈ ಬಾರಿ ಅವರು ಸಮರ್ಪಕವಾಗಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸುಳ್ಳಿನ ಗ್ಯಾರಂಟಿ ನೀಡಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ, ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಈ ಎಲ್ಲ ಗ್ಯಾರಂಟಿಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಇರಲಿವೆ.
– ಅಲ್ಕೋಡ ಹನುಮಂತಪ್ಪ.
ಮಾಜಿ ಸಚಿವರು.


Spread the love

LEAVE A REPLY

Please enter your comment!
Please enter your name here