2-3 ದಿನಗಳಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರು

0
chandru lamani
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣಕ್ಕೆ ನೀರು ಸರಬರಾಜಾಗುವ ತುಂಗಭದ್ರಾ ನದಿ, ಮೇವುಂಡಿಯಲ್ಲಿನ ಜಾಕ್‌ವೆಲ್, ಪಂಪ್‌ಹೌಸ್ ಮತ್ತು ಸೂರಣಗಿಯ ನೀರು ಶುದ್ಧೀಕರಣ ಘಟಕವನ್ನು ಶನಿವಾರ ಶಾಸಕ ಡಾ.ಚಂದ್ರು ಲಮಾಣಿ ಪರಿಶೀಲಿಸಿದರು.

Advertisement

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಜ.೨೮ರಂದೇ ಭದ್ರಾ ಜಲಾಶಯದ ಅಧಿಕಾರಿಗಳೊಂದಿಗೆ ಮಾತನಾಡಿ, ನೀರು ಬಿಡಿಸುವ ವ್ಯವಸ್ಥೆ ಮಾಡಿದ್ದೇನೆ.

ಈ ವರ್ಷ ಮಳೆ ಕೊರತೆಯಿಂದ ಬೇಸಿಗೆ ಪ್ರಾರಂಭದಲ್ಲಿಯೇ ನೀರಿನ ಸಮಸ್ಯೆ ಉಲ್ಬಣವಾಗಿದೆ. ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿರುವ ಬಗ್ಗೆ ಸದನದಲ್ಲಿಯೂ ವಿಷಯ ಪ್ರಸ್ತಾಪ ಮಾಡಿ ಅನುದಾನ ಕಲ್ಪಿಸುವಂತೆ ಆಗ್ರಹಿಸಿದ್ದೇನೆ ಎಂದರು.

ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ತುಂಗಭದ್ರಾ ನದಿಗೆ ನೀರು ಬಂದಿದೆ. ನದಿ ಪಾತ್ರದ ಮೇವುಂಡಿ ಜಾಕ್‌ವೆಲ್ ಹತ್ತಿರ ನೀರು ತಡೆಯುವ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಡ್ ಬ್ಯಾರೇಜ್ ನಿರ್ಮಿಸಲು ಅನುದಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನದಿ ಪಾತ್ರದಲ್ಲಿನ ಪಂಪ್‌ಸೆಟ್‌ಗಳನ್ನು ತೆರವು ಮಾಡುವ ಕ್ರಮ ಕೈಗೊಳ್ಳಲಾಗಿದೆ.

ನದಿ ನೀರು ಎತ್ತುವಳಿ ಮಾಡುವ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಹಂತಹಂತವಾಗಿ ಎಲ್ಲ ವಾರ್ಡುಗಳಿಗೆ ನೀರು ಪೂರೈಸಲಾಗುವುದು. ಸಾರ್ವಜನಿಕರು ಬೇಸಿಗೆ ಮುಗಿಯುವವರೆಗೂ ನೀರನ್ನು ಹಿತಮಿತವಾಗಿ ಬಳಸಬೇಕು ಎಂದರು.

ಈ ವೇಳೆ ಪುರಸಭೆ ಸಿಬ್ಬಂದಿ ಮಂಜುನಾಥ ಮುದಗಲ್, ಪರಶುರಾಮ ಮುಳಗುಂದ, ಬಸವರಾಜ ಚಕ್ರಸಾಲಿ, ಶೇಖಪ್ಪ ಕುರ್ತಕೋಟಿ ಇದ್ದರು.

ಕುಡಿಯುವ ನೀರಿನ ಪೈಪ್‌ಲೈನ್ ಹಳೆಯದಾಗಿದ್ದು, ಹೊಸ ಮಾರ್ಗಕ್ಕೆ ವಿಶೇಷ ಅನುದಾನದೊಂದಿಗೆ ೫೮ ಕೋಟಿ ರೂ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದೇನೆ. ಶುಕ್ರವಾರ ನದಿಗೆ ನೀರು ಬಂದಿದ್ದು, ೨-೩ ದಿನಗಳಲ್ಲಿ ಪಟ್ಟಣದ ಜನತೆಗೆ ನೀರು ಪೂರೈಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ವಹಿಸುವಂತೆ ಸೂಚಿಸಿದ್ದೇನೆ.

‌‌‌‌‌‌- ಡಾ. ಚಂದ್ರು ಲಮಾಣಿ.
ಶಾಸಕರು, ಶಿರಹಟ್ಟಿ.


Spread the love

LEAVE A REPLY

Please enter your comment!
Please enter your name here