ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0
red cross
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಮರ್ ರಾಜಾ ಇನ್ಪ್ರಾ ಪ್ರೈ. ಲಿ ಗದಗ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗದಗ, ಬಸವೇಶ್ವರ ಬ್ಲಡ್ ಬ್ಯಾಂಕ್ ಗದಗ, ಹಿಂದ್ ಎಜುಕೇಷನ್ ಅಸಿಸ್ಟನ್ಸ್ ಟ್ರಸ್ಟ್ ಗದಗ, ಮಾ ವಜ್ರೇಶ್ವರಿ ಫೌಂಢೇಶನ್ ಗದಗ ಇವುಗಳ ಸಹಯೋಗದಲ್ಲಿ 200 ಮೆ.ವ್ಯಾ ಸೋಲಾರ್ ಪಾವರ್ ಪ್ರೊಜೆಕ್ಟ್ ಗದಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ವಲಸೆ ಕಾರ್ಮಿಕರಿಗೆ ಸೊಳ್ಳೆ ಪರದೆ ಮತ್ತು ಸ್ಥಳೀಯ ಕಾರ್ಮಿಕರಿಗೆ ಹೈಜನಿಕ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಸರ್ಜಾಪೂರ ಗ್ರಾಮದ ವ್ಯಾಪ್ತಿಯಲ್ಲಿರುವ ಸೋಲಾರ್ ಪಾವರ್ ಪ್ರೊಜೆಕ್ಟ್ ಕಾರ್ಯಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಅವರು ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತ ಶೇಷ್ಠವಾಗಿದೆ. ಒಬ್ಬ ವ್ಯಕ್ತಿಯ ರಕ್ತದಾನದಿಂದಾಗಿ ಹಲವಾರು ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು.

ಪ್ರೊಜೆಕ್ಟ್ ಮ್ಯಾನೇಜರ್ ಎ.ರವಿಕುಮಾರ, ಎಚ್.ಎಸ್.ಇ ಮ್ಯಾನೇಜರ್ ಎಂ.ಡಿ. ಇಮ್ತಿಯಾಜ್ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 54 ಕಾರ್ಮಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. 20 ಕಾರ್ಮಿಕರಿಗೆ ಹೈಜೆನಿಕ್ ಕಿಟ್ ಹಾಗೂ 20 ಜನರಿಗೆ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಆರ್‌ಐಪಿಎಲ್‌ನ ಎಚ್‌ಎಸ್‌ಇ ಲೀಡರ್ ಶರತ್‌ಕುಮಾರ, ಮಾ ವಜ್ರೇಶ್ವರಿ ಸಂಸ್ಥೆಯ ಅಧ್ಯಕ್ಷರು ಹಾಗೂ ರೆಡ್ ಕ್ರಾಸ್ ಸದಸ್ಯೆ ಸುವರ್ಣ ನಿಡಗುಂದಿ, ವೈಧ್ಯಕೀಯ ವಿದ್ಯಾರ್ಥಿಗಳಾದ ಪವನ್, ಶಿವರಾಜ್, ನರೇಶ್, ಗುರುರಾಜ್ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಪ್ರಕಾಶ ಗಾಣಿಗೇರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here