ಪಂ.ಪುಟ್ಟರಾಜ ಕವಿ ಗವಾಯಿಗಳವರ ಜಯಂತ್ಯುತ್ಸವ

0
hiremat
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪಂಡಿತ ಡಾ. ಪುಟ್ಟರಾಜ ಗವಾಯಿಗಳವರ 110ನೇ ಜಯಂತ್ಯುತ್ಸವದ ಅಂಗವಾಗಿ 68 ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 3, ರವಿವಾರ ಮುಂಜಾನೆ 10 ಗಂಟೆಗೆ ಇಲ್ಲಿನ ಕಳಸಾಪೂರ ರಸ್ತೆಯ ವೀಮಲೇಶ್ವರ ನಗರದ ಶ್ರೀರಾಮ ಬಂಜಾರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಸಮಾರಂಭದಲ್ಲಿ ಡಾ. ಪುಟ್ಟರಾಜ ಕವಿ ಗವಾಯಿಗಳವರ ಹೆಸರಿನಲ್ಲಿ ಒಟ್ಟು 68 ಜನ ಸಾಹಿತ್ಯ, ಸಂಗೀತ, ವೈದ್ಯ ಬ್ರಹ್ಮ, ಸಾಮಾಜಿಕ ಕೌಶಲ್ಯ, ಕಲಾಚೇತನ, ಜಾನಪದ ಗಂಗೋತ್ರಿ, ಆದರ್ಶ ದಂಪತಿಗಳು ಇಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಡಾ. ಪರಮಪೂಜ್ಯಶ್ರೀ ಕಲ್ಲಯ್ಯಜ್ಜನವರು, ಸಮ್ಮುಖವನ್ನು ಶ್ರೀ ಮ.ಘ.ಪ್ರ. ಧರ್ಮರತ್ನ ಡಾ. ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತ ಹಿರೇಮಠ ಕೊಲ್ಹಾರ ಜಿಲ್ಲಾ ವಿಜಯಪುರ ಇವರು ವಹಿಸಲಿದ್ದು, ಉದ್ಘಾಟನೆಯನ್ನು ಶ್ರೀ ಷ.ಬ್ರ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಭೂಕೈಲಾಸ ಮೇಲು ಗದ್ದುಗೆ ಸಂಸ್ಥಾನ ಹಿರೇಮಠ ಪುಣ್ಯಕ್ಷೇತ್ರ ಇಟಗಿ ಚಿಕ್ಕಮ್ಯಾಗೇರಿ ಇವರು ನೆರವೇರಿಸುವರು.

ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದಿಂದ ಪ್ರತಿ ವರ್ಷದಂತೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವ್ಹಿ.ವ್ಹಿ. ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್. ಹೊಸಮನಿ, ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ, ಕನ್ನಡ ಜಾನಪದ ಪರಿಷತ್ ಶಿರಹಟ್ಟಿಯ ಅಧ್ಯಕ್ಷ ಕೆ.ಎ. ಬಳಿಗಾರ, ಅಖಿಲ ಭಾರತ ಜಂಗಮ ಸಮಿತಿಯ ಜಿಲ್ಲಾಧ್ಯಕ್ಷ ಫ್ರಭುಸ್ವಾಮಿ ದಂಡಾವತಿಮಠ, ಪತ್ರಕರ್ತ ಡಾ. ಅನಂತ ಕಾರ್ಕಳ, ಗದಗ ಜಿಲ್ಲಾ ಬಂಜಾರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಭೀಮಸಿಂಗ್ ರಾಠೋಡ, ಶ್ರೀ ವೀರೇಶ್ವರ ಪುಣ್ಯಾಶ್ರಮದ ಅನ್ನಪೂರ್ಣ ಬಸವರಾಜ ಹಿಡ್ಕಿಮಠ, ಪ್ರಮುಖರಾದ ಹೇಮಾಕ್ಷಿ ವ್ಹಿ.ಕಿರೇಸೂರ, ಆನಂದಯ್ಯ ದಾನಯ್ಯ ವಿರಕ್ತಮಠ, ಡಾ. ಸೌಭಾಗ್ಯ ಅಶೋಕ ಕೊಪ್ಪ, ಹೆಸ್ಕಾಂನ ಉಮೇಶ, ದಿನೇಶ ಎನ್.ದಾವಣಗೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.


Spread the love

LEAVE A REPLY

Please enter your comment!
Please enter your name here