ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ

0
kalakappa bandi
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬ್ರಾಹ್ಮಣ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡವುದಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಭರವಸೆ ನೀಡಿದರು.

Advertisement

ಗುರುವಾರ ಪಟ್ಟಣದ ಹಿರೇಬಜಾರದ ರುಕ್ಮೀಣಿ ಪಾಂಡುರಂಗ ದೇವಸ್ಥಾನದಲ್ಲಿ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ನೂತನವಾಗಿ ನಿರ್ಮಿಸಿದ ಸಭಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜ ಸರ್ವೇಜನಾಃ ಸುಖೀನೋ ಭವಂತು ಎಂದು ಹೇಳುವ ಸಮಾಜ. ಅಂತಹ ಸಮಾಜದಿಂದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಪ್ರತಿಯೊಂದು ಜಾತಿಯಲ್ಲಿಯೂ ಬಡವರಿದ್ದಾರೆ. ಆದರೆ, ಬ್ರಾಹ್ಮಣ ಸಮುದಾಯದಲ್ಲಿರುವ ಬಡವರು ಅದನ್ನು ತೋರ್ಪಡಿಸದೇ ಇರುವುದರಲ್ಲೇ ಸ್ವಾಭಿಮಾನದ ಬದುಕು ನಡೆಸುತ್ತಿದ್ದು, ಅವರ ಆರ್ಥಿಕ ಸ್ಥಿತಿಯನ್ನು ಸರ್ಕಾರ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು, ಕಾಯ್ದೆ ಸೌಲಭ್ಯಗಳ ವಿಚಾರದಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕಿದೆ ಎಂದರು.

ಈ ವೇಳೆ ವಿವಿಧ ಗಣ್ಯರಿಗೆ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ಸನ್ಮಾನಿಸಿದ ಬಳಿಕ ಮಾಜಿ ಸಚಿವರಿಗೆ ಸಮಾಜದಿಂದ ಮನವಿ ನೀಡಲಾಯಿತು.

ಸುಧಾಕರ ಕುಲಕರ್ಣಿ, ಕೃಷ್ಣಾಚಾರ್ಯ ಇಟಗಿ, ಅಶೋಕ ತಾಸಿನ, ಕಲ್ಲಿನಾಥಶಾಸ್ತಿ ಜೀರೆ, ಪ್ರಸಾದ ಕೆರಕಲಮಟ್ಟಿ ಸುರೇಶ ಪೂಜಾರ, ವಾಸು ಕುಲಕರ್ಣಿ, ಭಾಸ್ಕರ ರಾಯಬಾಗಿ, ಸಂಜೀವ ಜೋಶಿ, ಶಿವಾನಂದ ಮಠದ, ಅಶೋಕ ವನ್ನಾಲ, ಭದರಿನಾಥ ಜೋಶಿ, ಶ್ರೀನಿವಾಸ ತೈಲಂಗ್, ರವಿ ಕುಲಕರ್ಣಿ ಸಮಾಜದ ಮಹಿಳಾ ಮಂಡಲದ ಅಧ್ಯಕ್ಷೆ ಶಾರದಾ ತಾಸಿನ, ಶ್ರೀಮತಿ ಕುಲಕರ್ಣಿ, ರಾಧಾ ಇಟಗಿ ಸಂಧ್ಯಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದಲ್ಲಿ ರಘುನಾಥಭಟ್ಟ ತಾಸಿನ ಹಾಗೂ ಕೆ.ಸತ್ಯನಾರಾಯಣಭಟ್ಟ ಅವರಿಂದ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜೆ ಹಾಗೂ ರುಕ್ಮಿಣಿ ಪಾಂಡುರಂಗ, ಮಾರುತಿ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಸಮಾಜದಿಂದ ಮಹಾಪ್ರಸಾದ ನಡೆಯಿತು.


Spread the love

LEAVE A REPLY

Please enter your comment!
Please enter your name here