ವಿಶೇಷ ಮಕ್ಕಳಿಗೆ ಸ್ಪೂರ್ತಿ ತುಂಬಿ

0
rotary
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶ್ರವಣ ಎಂದರೆ ಕೇಳುವುದು, ಮನನ ಮಾಡಿಕೊಳ್ಳುವದು. ಆದರೆ ಕೆಲವು ಮುಗ್ಧ ಮಕ್ಕಳು ಬಾಲ್ಯದಲ್ಲಿಯೇ ಕೇಳುವ, ಮಾತನಾಡುವ ಸಾಮರ್ಥ್ಯ ಕಳೆದುಕೊಂಡು ಮೌನಿಗಳಾಗುತ್ತಾರೆ. ಇಂತಹ ಮಕ್ಕಳಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕೆಂದು ರೋಟರಿ ಕ್ಲಬ್‌ನ ಡಿಸ್ಟಿçಕ್ಟ್ ಅಸಿಸ್ಟಂಟ್ ಗವರ್ನರ್ ಶರಣಬಸಪ್ಪ ಗುಡಿಮನಿ ಹೇಳಿದರು.

Advertisement

ಅವರು ಗದಗ ರೋಟರಿ ಸೆಂಟ್ರಲ್ ಕ್ಲಬ್‌ನಿಂದ ಗದುಗಿನ ಸ್ಪಂದನ ಕಿವುಡ ಹಾಗೂ ಮೂಕ ಮಕ್ಕಳ ಶಾಲೆಯಲ್ಲಿ ಜರುಗಿದ ವಿಶ್ವ ಶ್ರವಣ ದಿನ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯವೆಂದರೆ ಆಟಪಾಠಗಳೊಂದಿಗೆ, ಮಿತ್ರರೊಡನೆ ಕಳೆಯಬೇಕು. ಆದರೆ ಈ ಮಕ್ಕಳು ಯಾವುದೇ ತಪ್ಪು ಮಾಡದೇ ಇಂತಹ ನೋವು ಅನುಭವಿಸಬೇಕಾಗುತ್ತದೆ. ನಾವು ಇಂತಹ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರಲ್ಲದೆ, ಲಕ್ಷ್ಮೇಶ್ವರದ ಕಿವುಡ-ಮೂಗರ ಶಾಲೆಗೆ ರೋಟರಿ ಕ್ಲಬ್ ನೀಡಿದ ದೊಡ್ಡ ಮೊತ್ತದ ಕೊಡುಗೆಯನ್ನು ಸ್ಮರಿಸಿದರು.

ಕ್ಲಬ್ ಕಾರ್ಯದರ್ಶಿ ಸಂತೋಷ ತೋಟಗಂಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಮಕ್ಕಳು ಸಮಾಜದಲ್ಲಿ ಪ್ರತಿನಿತ್ಯ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈಜ್ಞಾನಿಕವಾಗಿ ಈ ಮಕ್ಕಳಿಗೆ ಸೌಲಭ್ಯ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದರು.

ದೀಪಾ ಮಸಾಳೆ, ಪೂಜಾ ದೊಡ್ಡಮನಿ ಪ್ರಾರ್ಥಿಸಿದರು. ಕವಿತಾ ದಂಡಿನ ಸ್ವಾಗತಿಸಿದರು. ಮುಖ್ಯೋಪಾಧ್ಯಾಯೆ ಲಲಿತಾ ಪಾಟೀಲ ಪರಿಚಯಿಸಿದರು. ಶಾಂತಾ ಗದಗ ನಿರೂಪಿಸಿದರು. ಕೊನೆಗೆ ಚಂದ್ರಮ್ಮ ಕೊಟಗಿ ವಂದಿಸಿದರು.
ವೇದಿಕೆಯ ಮೆಲೆ ಎಸ್.ಎಫ್. ದ್ಯಾಪನಗೌಡ್ರ, ಸೋಮಶೇಖರ ಚಿಕ್ಕಮಠ, ವಿದ್ಯಾಶ್ರೀ ಪೂಜಾರ, ಸವಿತಾ ಗಚ್ಚಮ್ಮನವರ, ಪ್ರಭಾವತಿ ಮೆಣಸಿನಕಾಯಿ, ಶಿವಲೀಲಾ ಶೇಗಣಿ, ರೇಣುಕಾ ಗಡಗಿ, ಮಲ್ಲಮ್ಮ ಪಾಟೀಲ, ನಿರಂಜನ ಸಂಪಣ್ಣವರ, ರವೀಂದ್ರ ಮೊರಬದ ಉಪಸ್ಥಿತರಿದ್ದರು.

ಕ್ಲಬ್‌ನಿಂದ ಮಕ್ಕಳಿಗೆ ಸಿಹಿ ಹಾಗೂ ಬರವಣಿಗೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹಿರೇಮಠ, ಶ್ರವಣ ಹಾಗೂ ಮಾತಿನ ವಿಕಲತೆ ಇರುವ ಮಕ್ಕಳು ಮುದ್ದು ಬರುವಂತಿದ್ದು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ನಾವು ಶ್ರಮಿಸಬೇಕೆಂದರು.


Spread the love

LEAVE A REPLY

Please enter your comment!
Please enter your name here