ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಮಾರ್ಗವಾಗಿ ಆಯೋಧ್ಯೆಗೆ ತೆರಳುವ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ವಿಷೇಶವಾಗಿ ಗದಗ ರೈಲು ನಿಲ್ದಾಣದಲ್ಲಿ ಆಸನ ವ್ಯವಸ್ಥೆ ಮಾಡಿ, ರೇಲ್ವೆ ವೈದ್ಯಾಧಿಕಾರಿ ಡಾ. ಕವಿರಾಜ ಕೊಟ್ನೂರ ಅವರು ಪ್ರಯಾಣಿಕರಿಗೆ ಸೂಕ್ತ ಸಲಹೆ ನೀಡಿ ಅವಶ್ಯ ಬಿದ್ದಲ್ಲಿ ಚಿಕಿತ್ಸೆ ನೀಡಿ ಔಷಧಿ ನೀಡಿ ಸಹಕರಿಸುತ್ತಿರುವುದಕ್ಕಾಗಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ ಬ್ಯಾಳಿ ಅಭಿನಂದನೆ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ರೇಲ್ವೆ ಅಧಿಕಾರಿಗಳಾದ ಏ.ಡಿ.ಎನ್. ಅಭಯ ಬಾಗಡೆ, ಏ.ಡಿ.ಇ.ಎನ್. ಮನೋಜ ಬಾಗಡೆ, ಸ್ಟೇಷನ್ ಮಾಸ್ಟರ, ಮಹೇಶ ಬೇವುರ, ಸಿ.ಪಿ.ಎಸ್.ಆರ್ ಸಿಶಿಲ ಎನ್.ಎಸ್, ಸಿ.ಸಿ.ಐ ರೀತೆಶ ಕುಮಾರ ಮುಂತಾದವರು ಉಪಸ್ಥಿತರಿದ್ದರು.