ಶ್ರೀಗಳು ಸಂಗೀತದ ಸಾಮ್ರಾಜ್ಯದ ಮಿನುಗುತಾರೆ

0
puttaraja
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಂದಿನ ಕಾಲದಲ್ಲಿ ತಂದೆ-ತಾಯಿಗಳು ಅಂಧ, ಅನಾಥ ಮಕ್ಕಳನ್ನು ತಾತ್ಸಾರದಿಂದ ನೋಡುವ ಸಂದರ್ಭದಲ್ಲಿ ಪಂ.ಪುಟ್ಟರಾಜ ಗವಾಯಿಗಳು ಅಂತಹ ಮಕ್ಕಳನ್ನು ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆತಂದು ಅನ್ನ, ಅಹಾರ, ಬಟ್ಟೆ ನೀಡುವದರ ಜೊತೆಗೆ ಸಂಗೀತ ವಿದ್ಯೆಯನ್ನು ನೀಡಿ ಅವರಿಗೆ ಸ್ವಾಭಿಮಾನದ ಬದುಕು ಸಾಗಿಸಲು ಕಲಿಸಿ, ಅವರ ಬಾಳಿನ ನಂದಾದೀಪವಾದರು ಎಂದು ಶ್ರೀ ಪಂ.ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಜಿ. ಕಟಗಿಹಳ್ಳಿ ನುಡಿದರು.

Advertisement

ಇತ್ತೀಚೆಗೆ ನಗರದ ವೀರನಾರಾಯಣ ಬಡಾವಣೆಯಲ್ಲಿ ನಡೆದ ಶ್ರೀ ಪಂ.ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವ ಹಾಗೂ ಶ್ರೀ ಪಂ.ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಶ್ರೀ ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.

ಪುಟ್ಟರಾಜ ಗವಾಯಿಗಳು ಸಂಗೀತದ ಸಾಮ್ರಾಜ್ಯದಲ್ಲಿ ಮಿನುಗು ತಾರೆಯಾಗಿ ಬೆಳಗುತಿದ್ದಾರೆ. ಅವರ ಶಿಷ್ಯ ಬಳಗ ದೇಶ-ವಿದೇಶದಲ್ಲಿ ಸಂಗೀತ, ನಾಟಕ, ಪುರಾಣ, ಪ್ರವಚನ, ಕೀರ್ತನ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿರೂಪಾಕ್ಷ ಗವಾಯಿ ಪಟ್ಟದಕಲ್ಲು, ಶಿವಪ್ಪ ಲಗಳಿ, ಸುನೀಲ್ ಚಿನ್ನಾಪೂರ, ಶಿವಯ್ಯ ಬೆಳ್ಳೆರಿಮಠ, ಶ್ರೀ ಪಂ.ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಬಿ.ಬಿ. ಪಾಟೀಲ, ಕಾರ್ಯದರ್ಶಿ ಜಿ.ಬಿ. ಬೆಣಕಲ್, ಸಹಕಾರ್ಯದರ್ಶಿ ಈಶಪ್ಪ ಅಂಗಡಿ, ಖಜಾಂಚಿ ಮಹಾಂತೇಶ ಲಗಳಿ, ನಿರ್ದೇಶಕರಾದ ಬಸವರಾಜ ಡಾವಣಗೇರಿ, ಭೀಮಪ್ಪ ಮೊಕಾಶಿ, ಶರಣಪ್ಪ ಮೇಟಿ, ಮಂಜುನಾಥ ಕ್ಯಾಡದ, ಮಂಜುನಾಥ ಅಂಗಡಿ, ಸಿದ್ದು ಲಗಳಿ, ಪುಟ್ಟರಾಜ ಪಾಟೀಲ, ಶಾಂತಮ್ಮ ಬೆಳ್ಳೆರಿಮಠ, ಸುವರ್ಣ ಪಾಟೀಲ, ಜ್ಯೋತಿ ಕಟಗಿಹಳ್ಳಿಮಠ, ಶಶಿಕಲಾ ಪಟ್ಟದಕಲ್ಲಮಠ, ಗೀತಾ ಬೆಣಕಲ್, ಪುಷ್ಪಾ ಚಿನ್ನಾಪೂರ, ಪಾರಮ್ಮ ಅಂಗಡಿ, ಪಾರವ್ವ ಮೊಕಾಶಿ ಮುಂತಾದವರು ಉಪಸ್ಥಿತರಿದ್ದರು.

ಜಿ.ಬಿ. ಬೆಣಕಲ್ ಸ್ವಾಗತಿಸಿದರು. ಬಿ.ಬಿ. ಪಾಟೀಲ ನಿರೂಪಣೆ ಮಾಡಿದರು. ಮಹಾಂತೇಶ ಲಗಳಿ ವಂದಿಸಿದರು.

ಸಂಗೀತ ಕಲಾವಿದರಾದ ಪ್ರೊ. ವಿರೂಪಾಕ್ಷ ಗವಾಯಿ ಪಟ್ಟದಕಲ್ಲು, ಶ್ರೀಶೈಲ ಚಿಕ್ಕಮಠ, ಸೌಜನ್ಯ ಕಟಗಿಹಳ್ಳಿಮಠ, ಅಕ್ಷತಾ ಹಿರೇಮಠ, ಕೃತಿಕಾ ಹಿಡ್ಕಿಮಠ, ಸುಮತಿ ಮುರಗೋಡ ಇವರು ಸುಗಮ ಸಂಗೀತ, ಶಾಸ್ತಿçÃಯ ಸಂಗೀತ, ಜಾನಪದ ಸಂಗೀತದ ಮೂಲಕ ಜನಮನ ಸೆಳೆದರು. ಪ್ರೊ. ಎಂ.ಎಸ್. ಮಠದ, ವಿಠ್ಠಲ ಹೂಗಾರ, ಅಕ್ಷಯ ತಬಲಾ ಸಾಥ್ ನೀಡಿದರು.


Spread the love

LEAVE A REPLY

Please enter your comment!
Please enter your name here