ವಿಜಯಸಾಕ್ಷಿ ಸುದ್ದಿ, ಗದಗ : ದೇಶ ವಿರೋಧಿ ಮತ್ತು ದೇಶ ವಿಭಜನೆಯ ಹೇಳಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಾಗ್ರತಾ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ರಾಜ್ಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು, ಘೊಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ, ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 3ನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರ ನೀಡಲು ತಿರಂಗಾ ಯಾತ್ರೆ ಹಾಗೂ ನಾರಿ ಶಕ್ತಿವಂದನ ಪಾದಯಾತ್ರೆ ಗದಗ ನಗರದ ಭೂಮರೆಡ್ಡಿ ಸರ್ಕಲ್‌ನಿಂದ ಟಾಂಗಾಕೂಟವರೆಗೆ ಜರುಗಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮುಖಂಡರಾದ ಪಕ್ಕಿರೇಶ್ ರಟ್ಟಿಹಳ್ಳಿ, ಲಿಂಗರಾಜ್ ಪಾಟೀಲ್, ಭಾರತಿ ಅಳವಂಡಿ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ಕಾಂತೀಲಾಲ ಬನ್ಸಾಲಿ, ಸಿದ್ದು ಪಲ್ಲೇದ, ನಗರಸಭಾಧ್ಯಕ್ಷೆ ಉಷಾ ದಾಸರ, ಇರ್ಷಾದ ಮಾನ್ವಿ, ಅನಿಲ ಅಬ್ಬಿಗೇರಿ, ದೇವಪ್ಪ ಗೊಟೂರ, ಅಶೋಕ ಸಂಕಣ್ಣವರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಗಂಗಾಧರ ಹಬೀಬ, ಅಶೋಕ ಕರೂರ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಕರೂರ, ಅಮರನಾಥ ಬೆಟಗೇರಿ, ಶಿವು ಹಿರೇಮನಿಪಾಟಿಲ, ಸುಧೀರ ಕಾಟಿಗರ, ವಿಜಯಲಕ್ಷ್ಮಿ ಶಶಿಧರ ದಿಂಡೂರ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ವಿದ್ಯಾವತಿ ಅಮರನಾಥ ಗಡಗಿ, ಸಿದ್ರಾಮೇಶ ಹಿರೇಮಠ, ಲಕ್ಷ್ಮಿ ಶಂಕರ ಕಾಕಿ, ಬೂದಪ್ಪ ಹಳ್ಳಿ, ರಮೇಶ ಸಜ್ಜಗಾರ, ರೇಖಾ ಬಂಗಾರಶೆಟ್ಟರ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಮಾಂತೇಶ ಬಾತಾಖಾನಿ, ವೆಂಕಟೇಶ ಹಬೀಬ, ನವೀನ ಕೊಟೆಕಲ್, ಸುರೇಶ ಮರಳಪ್ಪನವರು, ಸುರೇಶ ಚಿತ್ತರಗಿ, ಶಿವು ಗೊಟೂರ ಸೇರಿದಂತೆ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.