ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ವಿಕಾಸವು, ವೈಜ್ಞಾನಿಕ ಮನೋಭಾವನೆ ಹೊಂದಿ ಸದೃಢ ಆರೋಗ್ಯ ಹೊಂದುವಲ್ಲಿ ಗಣನೀಯ ಅಭಿವೃದ್ಧಿಯಾಗಿದೆ ಎಂದು ರಕ್ತ ತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಹೇಳಿದರು.
ಗದುಗಿನ ಸ.ಹಿ.ಪ್ರಾ. ಶಾ. ನಂ-6ರಲ್ಲಿ ವಿದ್ಯಾರ್ಥಿಗಳಿಗೆ ಉಚಿತ ರಕ್ತ ಗುಂಪು ತಪಾಸಣೆ ಮಾಡಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತಿದೆ. ಸಮತೋಲಿತ ಆಹಾರ ಸೇವಿಸಬೇಕು ಎಂದರು.
ಶಾಲೆ ನಂ-6 ಹಾಗೂ ಉರ್ದು ಶಾಲೆಯ ಸುಮಾರು 250 ವಿದ್ಯಾರ್ಥಿಗಳಿಗೆ ಉಚಿತ ರಕ್ತತಪಾಸಣೆ ನಡೆಸಿ ರಕ್ತಗುಂಪಿನ ಕಾರ್ಡ್ ವಿತರಿಸಲಾಯಿತು.
ವೇದಿಕೆಯ ಮೇಲೆ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ಮುಖ್ಯೋಪಾಧ್ಯಾಯ ಎಸ್.ಜಿ. ಓದನವರ, ಐ.ಟಿ. ಹೊಸಮನಿ ಉಪಸ್ಥಿತರಿದ್ದರು. ಜ್ಯೋತಿ ಬನ್ನಿದಿಣ್ಣಿ, ಚಿನ್ನು ಚವ್ಹಾಣ ಪ್ರಾರ್ಥಿಸಿದರು. ಆರ್.ಕೆ. ಹಿರೇಮಠ ಸ್ವಾಗತಿಸಿದರು. ಈಶ್ವರ ಕಟ್ಟಿಮನಿ ನಿರೂಪಿಸಿದರು. ಬಿ.ಜಿ. ಮಾಗಿ, ಬಿ.ವೈ. ತಳವಾರ ಪರಿಚಯಿಸಿದರು. ಪಿ.ಎಸ್. ಕಳವಾಯಿ ವಂದಿಸಿದರು.