ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದ ಇಂಜಿನಿಯರ್ ಶ್ರೀಕಾಂತ ಕಟಗಿಯವರ `ಕ್ಷೇತ್ರಪತಿ’ ಕನ್ನಡ ಸಿನಿಮಾ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಗೆ ಆಯ್ಕೆಯಾಗಿದೆ.
ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಚಿತ್ರಗಳ ಮೂಲಕ ಅಪಾರ ಜನಮನ್ನಣೆ ಪಡೆದಿರುವ ನಟ ನವೀನ್ ಶಂಕರ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ಮತ್ತು ದ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ಬಸ್ಸುರ್ ಸಂಗೀತವಿದ್ದು, ಮೂವೀಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಖ್ಯಾತ ಕೆಆರ್ಜಿ ಡಿಸ್ಟ್ರಿಬ್ಯೂಟರ್ಸ್ ಬಿಡುಗಡೆ ಮಾಡಿದೆ.
ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕ್ಷೇತ್ರಪತಿ ಸಿನಿಮಾಗೆ ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಬಾಬರಿ ಸೇರಿದಂತೆ ಇಡೀ ತಿಮ್ಮಾಪೂರ ಗ್ರಾಮಸ್ಥರು ನಿರ್ದೇಶಕ ಶ್ರೀಕಾಂತ ಕಟಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮದ ಭಾರ್ಗವ ಎಚ್.ಕೆ, ಜಗದೀಶ ರ್ಯಾವಣಕಿ, ಶ್ರೀಕಾಂತ ಇದ್ಲಿ, ಭೀಮಪ್ಪ ಗಂಗರಾಹುತರ, ಕಲ್ಲಪ್ಪ ಆಲೂರ, ಹಾಲೇಶ ಗದಗ, ರವಿ ಗುಡ್ಲನೂರ, ನಿಂಗಪ್ಪ ಗುಡ್ಲನೂರ, ಮಹೇಶ ಬೆಟಗೇರಿ, ಶರಣಪ್ಪ ಜೋಗಿನ, ಹುಚ್ಚೀರಪ್ಪ ಜೋಗಿನ, ಇಸ್ಮಾಯಿಲ್ ನದಾಫ್, ಹೇಮರಡ್ಡಿ ಮಳ್ಳಿ ಮುಂತಾದವರು ಶ್ರೀಕಾಂತ ಕಟಗಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.



