ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ. 2ರ ಕುಷ್ಟಗಿ ಚಾಳದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕೃಷ್ಣಗೌಡ ಎಚ್.ಪಾಟೀಲ ಗೌರವಿಸಿ ಸನ್ಮಾನಿಸಿದರು.
ಹರ್ಷಿತ ಪುಷ್ಪೇಂದ್ರ ಪುಂಗಲಿಯಾ ಅಯೋಧ್ಯೆಯ ಶ್ರೀ ರಾಮಮಂದಿರದ ಚಿತ್ರ ರಚಿಸಿ, ರಾಷ್ಟಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ನಿಮಿತ್ತ ಹಾಗೂ ಕುಸುಮಾ ಆನಂದ ಜೋಶಿ ಕ್ಯಾನ್ಸರ್ ತಡೆಗಟ್ಟುವ ವಿಶೇಷ ಔಷಧ ಸಂಶೋಧನೆಗಾಗಿ ರಾಜೀವಗಾಂಧಿ ವಿಶ್ವವಿದ್ಯಾಲಯದಿಂದ ಪ್ರಶಸ್ತಿಯನ್ನು ಪಡೆದ ನಿಮಿತ್ತ ಕೃಷ್ಣಗೌಡ ಪಾಟೀಲ ಸನ್ಮಾನಿಸಿ ಗೌರವಿಸಿದರು.
ಶಂಭು ಹುನಗುಂದ, ಲಕ್ಷ್ಮಣ ವಡ್ಡರಕಲ್ಲ ವೇದಿಕೆಯಲ್ಲಿದ್ದರು. ಮುಖ್ಯ ಅತಿಥಿಗಳಾದ ಎಸ್.ಎನ್.ಬಳ್ಳಾರಿ, ಸುರೇಶ ಕಟ್ಟಿಮನಿ, ಪ್ರಲ್ಹಾಹ ಮಿರ್ಜಿ, ಬಸವರಾಜ ಕಡೇಮನಿ, ಶಿವರಾಜ ಕೊರಸ, ಸಾವಿತ್ರಿ ಹೂಗಾರ, ಹೇಮಲತಾ ಪುಂಗಲಿಯಾ, ಮಲ್ಲಣ್ಣ ಬೆಟದೂರ, ಮಹೇಶ ಗುರುಗಳು, ಮಡಿವಾಳ, ಪ್ರವೀಣ ಚಪ್ಪರಮನಿ ಉಪಸ್ಥಿತರಿದ್ದರು.



