HomePolitics Newsಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ಸ್ವಾಗತಾರ್ಹ

ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ಸ್ವಾಗತಾರ್ಹ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವಿಶ್ವಕರ್ಮ ಸಮಾಜದ ಮುಖಂಡ ಕೆ.ಲಕ್ಷ್ಮಣ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷರನ್ನಾಗಿ ಮಾಡಿರುವುದು ಸ್ವಾಗತಾರ್ಹ. ಆದರೆ ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಅಧ್ಯಕ್ಷ ಸ್ಥಾನವನ್ನು ರದ್ದು ಪಡಿಸುವಂತೆ ವಿರೋಧಿಸಿ ಹೇಳಿಕೆ ನೀಡಿರುವುದು ಸಮಜಸವಲ್ಲ ಎಂದು ಸಮಾಜದ ಮುಖಂಡ ಕಲ್ಲಹಳ್ಳಿ ಗೋಣೆಪ್ಪ ಅರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮ ಸಮಾಜದ ಮುಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಸಣ್ಣ ಸಮಾಜದ ವ್ಯಕ್ತಿಯನ್ನು ಗುರುತಿಸಿ ಎರಡನೇ ಬಾರಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನೀಡಿದ್ದಾರೆ. ಮಾಜಿ ಶಾಸಕರು ಪಕ್ಷದ ಕಾರ್ಯಕರ್ತರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮನ್ನಿಸಿ ಪಕ್ಷದ ವರಿಷ್ಠರು ಕೆ.ಲಕ್ಷ್ಮಣ ಅವರಿಗೆ ನೀಡಿರುವ ಹುದ್ದೆಯನ್ನು ಮುಂದುವರೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಜಿಲ್ಲಾ ಸಮಾಜದ ಅಧ್ಯಕ್ಷ ಮಂಜುನಾಥ, ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು. ಮುಖಂಡರಾದ ರಂಗಾಪುರದ ಭರಮಪ್ಪ, ವಿರೂಪಾಕ್ಷಪ್ಪ, ಹಾಲೇಶ್, ನರಸಿಂಹ, ವೆಂಕಟೇಶ್ ಕಲ್ಲಹಳ್ಳಿ, ಮಂಜುನಾಥ ಹಾಗೂ ಇತರರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!