ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಲೋಕಸಭಾ ಚುನಾವಣೆ ಮುಗಿದ ಸಂಜೆ ಒಳಗೆ ರಾಜ್ಯ ಕಾಂಗ್ರೆಸ್ ಸರಕಾರದ ಒಂದೊಂದೇ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಇಲ್ಲಿಯ 3, 8 ಮತ್ತು 9ನೇ ವಾರ್ಡಿನಲ್ಲಿ ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡರ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ 49.24 ಲಕ್ಷ ಅನುದಾನದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಡವರಿಗೆ ಗ್ಯಾರಂಟಿ ಕೊಡುವ ಬಗ್ಗೆ ನಮಗೆ ಅಸಮಾದಾನವಿಲ್ಲ. ಆದರೆ ಗ್ಯಾರಂಟಿಗಳನ್ನು ಕೊಡುವ ಭರದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಈ ಗ್ಯಾರಂಟಿಗಳು ಲೋಕಸಭಾ ಚುನಾವಣಿ ಮುಗಿದ 15 ದಿನದೊಳಗೆ ಕಾಂಗ್ರೆಸ್ ಸರಕಾರ ಒಂದೊಂದೇ ಕಾರಣವನ್ನು ನೀಡುತ್ತಾ ಬಂದ್ ಮಾಡುವುದು ನಿಶ್ಚಿತವಾಗಿದೆ. ಕಾರಣ ಸರಕಾರ ಹಣಕಾಸಿನ ತೊಂದರೆ ಅನುಭವಿಸುತ್ತಿದೆ.
ಯುಪಿಎ ಸರಕಾರ ಇದ್ದಾಗ ದೇಶದ ರಕ್ಷಣೆ ಕುಂಠಿತವಾಗಿ ಸೈನಿಕರು ಬಲಿಯಾಗುತ್ತಿದ್ದರು. ಆದರೆ ಮೋದಿಯವರು ಸೈನಿಕರಿಗೆ ಬಲ ತುಂಬಿದ್ದು, ಗಡಿ ಸುರಕ್ಷಿತವಾಗಿದೆ. ನಮ್ಮ ಗಡಿಗಳು ಶಾಂತವಾಗಿವೆ. 2028ರ ಚುನಾವಣೆಗೆ ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ನೀಡಿದ್ದಾರೆ. ಆದ್ದರಿಂದ ಎಲ್ಲರೂ ಪಕ್ಷ ಬೇಧ ಮರೆತು ನರೇಂದ್ರ ಮೋದಿಯವರನ್ನು ಬಹುಮತದೊಂದಿಗೆ ಗೆಲ್ಲಿಸಬೇಕಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿದರು. ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಲಕ್ಕುಂಡಿ ಮಂಡಲ ಬಿ.ಜೆ.ಪಿ ಅಧ್ಯಕ್ಷ ನಿಂಗಪ್ಪ ಮಣ್ಣೂರು, ಹಿರಿಯ ಮುಖಂಡ ವಸಂತ ಮೇಟಿ, ಗ್ರಾ.ಪಂ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಕುಬೇರಪ್ಪ ಬೆಂತೂರ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಬಸವರಾಜ ಹಟ್ಟಿ, ವಿರುಪಾಕ್ಷಿ ಬೆಟಗೇರಿ, ಲಲಿತಾ ಗದಗಿನ, ಲಕ್ಷ್ಮವ್ವ ಭಜಂತ್ರಿ, ಈರಮ್ಮ ಚಬ್ಬರಭಾವಿ, ಮಂಜುಳಾ ಮೆಣಸಿನಕಾಯಿ, ಪಕೀರವ್ವ ಬೇಲೇರಿ, ರಜೀಯಾಬೇಗಂ ತಹಶೀಲ್ದಾರ, ಪ್ರೇಮಾ ಮಟ್ಟಿ ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಬಿಜೆಪಿ ಹಿರಿಯ ಮುಖಂಡ ದತ್ತಾತ್ರೇಯ ಜೋಶಿ ನಿರೂಪಿಸಿ ವಂದಿಸಿದರು.
ವಿ.ಪ ಸದಸ್ಯ ಎಸ್.ವಿ, ಸಂಕನೂರ ಮಾತನಾಡಿ, ಬಹುದಿನದ ಬೇಡಿಕೆಯಂತೆ ಸುಲಭ ಶೌಚಾಲಯ ನಿರ್ಮಾಣ ಕಾಮಗಾರಿಗೆ ಈ ಭಾಗದ ಸಂಸದರಾದ ಪಿ.ಸಿ. ಗದ್ದಿಗೌಡರ ಅವರು ಅನುದಾನ ಒದಗಿಸಿದ್ದು ಸಂತಸ ತಂದಿದೆ. ಇದರೊಂದಿಗೆ ಎರಡು ಸಮುದಾಯ ಭವನಕ್ಕೆ ಸಿ.ಸಿ. ಪಾಟೀಲರು ಅನುದಾನ ಒದಗಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.