HomeGadag Newsಬಿಜೆಪಿಯಿಂದ ಜನಾಭಿಪ್ರಾಯ ಸಂಗ್ರಹ

ಬಿಜೆಪಿಯಿಂದ ಜನಾಭಿಪ್ರಾಯ ಸಂಗ್ರಹ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ ವಿಕಸಿತ ಭಾರತ ಲೋಕಸಭಾ ಚುನಾವಣೆ-2024ರ ಪ್ರಣಾಳಿಕೆ, ಸಂಕಲ್ಪ ಪತ್ರ ಜನಾಭಿಪ್ರಾಯ ಸಂಗ್ರಹವು ನಗರದ ಪ್ರೋಬೊಸ್ ಕ್ಲಬ್‌ನಲ್ಲಿ ಎಲ್ಲ ಹಿರಿಯ ನಾಗರಿಕರಿಂದ ಸಲಹೆ ಸಂಗ್ರಹಿಸಲಾಯಿತು.

ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶಶಿಧರ ದಿಂಡೂರ ಮಾತನಾಡಿ, 2024ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಅಭಿಪ್ರಾಯ ಸಂಗ್ರಹ ಕಾರ್ಯ `ಸಂಕಲ್ಪ ಪತ್ರ’ ಅಭಿಯಾನದ ಮೂಲಕ ನಡೆಯುತ್ತಿದ್ದು, ತಮ್ಮ ಅಭಿಪ್ರಾಯಗಳನ್ನು ನಮೋ ಆ್ಯಪ್ ಮೂಲಕ ಅಥವಾ 9090902024 ಸಂಖ್ಯೆಗೆ ಮಿಸ್ ಕಾಲ್ ಮಾಡಿ ಸಲಹೆ ನೀಡಬಹುದು. ಸಂಗ್ರಹ ಪೆಟ್ಟಿಗೆಯಲ್ಲಿ ಬರೆದು ಅಭಿಪ್ರಾಯ ತಿಳಿಸಬಹುದು. 10 ವರ್ಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ ಔಷದ, ಆಯುಷ್ಮಾನ್ ಭಾರತ, ಹರ್‌ಗರ್ ಸೌರ ವಿದ್ಯುತ್ ಹೀಗೆ ಅನೇಕ ಯೋಜನೆಗಳನ್ನು ಕೊಟ್ಟು ಭಾರತವನ್ನು ಸುಭದ್ರಗೊಳಿಸಿದ್ದಾರೆ ಎಂದರು.

ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಸಜ್ಜಗಾರ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಪ್ರಜೆಯಿಂದ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಲಹೆಗಳನ್ನು ಪಡೆಯುತ್ತಿದ್ದು, ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ, ದೇಶಾದ್ಯಂತ ರೈಲ್ವೆ ಮಾರ್ಗ ಸುಧಾರಣೆ, ಮೇಟ್ರೊ, ವಂದೇ ಭಾರತ್ ರೈಲು, ಆರ್ಟಿಕಲ್ 370 ರದ್ದತಿಗಳ ಮೂಲಕ ಭಾರತ ಮುನ್ನಡೆಯುತ್ತಿದ್ದು, ಸಬ್‌ಕಾ ಸಾತ್-ಸಬ್‌ಕಾ ವಿಕಾಸ್ ಎಂಬ ಪರಿಕಲ್ಪನೆಯೊಂದಿಗೆ ಮುನ್ನುಗ್ಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಶಿವವ್ವ ಕೆ.ಕುರುಡಗಿ, ಪ್ರೋಬೊಸ್ ಕ್ಲಬ್ ಅಧ್ಯಕ್ಷ ತೊಟಗೇರ, ಅಶೋಕ ಕೊಡಗಲಿ, ಬಿ.ಬಿ. ಗೌಡ್ರ, ಬಿ.ಎಂ. ಬಿಳೆಯಲಿ, ಆರ್.ಡಿ. ಕಪ್ಲಿ, ಸುರೇಕಾ ಪಿಳ್ಳಿ ಮುಂತಾದ ಹಿರಿಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!