ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಇತ್ತೀಚೆಗೆ ನೇಮಕ ಮಾಡಲಾಗಿದ್ದು, ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಳ ಗ್ರಾಮದ ಹಿರಿಯ ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಅವರನ್ನು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
Advertisement
ಜಾನಪದ ಅಕಾಡೆಮಿಯ ಸದಸ್ಯರಾಗಿ ನೇಮಕವಾದ ಶಂಕರಣ್ಣ ಸಂಕಣ್ಣವರನ್ನು ಜಿಲ್ಲೆಯ ಹಿರಿಯ ಕಲಾವಿದರಾದ ಅಶೋಕ ಬಣ್ಣದ, ಮೌನೇಶ ಸಿ.ಬಡಿಗೇರ, ಕಾವೆಂಶ್ರೀ, ಸಿಕೆಎಚ್ ಶಾಸ್ತ್ರೀ ಕಡಣಿ, ಶಿವು ಭಜಂತ್ರಿ, ಬಸವರಾಜ ಈರಣ್ಣವರ, ಬಸವರಾಜ ಹಡಗಲಿ, ಗಜಾನನ ವರ್ಣೇಕರ, ರಾಚಯ್ಯ ಹೊಸಮಠ, ವಿಶ್ವನಾಥ ಬೇಂದ್ರ, ಉಜ್ವಲ್ ಕಬಾಡಿ ಸೇರಿದಂತೆ ಕಲಾವಿದರು ಅಭಿನಂದಿಸಿದ್ದಾರೆ.