HomeGadag Newsವಿಜಯಕುಮಾರ್ ಹಿರೇಮಠ ದಂಪತಿಗಳಿಗೆ `ಆದರ್ಶ ದಂಪತಿ' ಪುರಸ್ಕಾರ

ವಿಜಯಕುಮಾರ್ ಹಿರೇಮಠ ದಂಪತಿಗಳಿಗೆ `ಆದರ್ಶ ದಂಪತಿ’ ಪುರಸ್ಕಾರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಗದಗ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಪಂಡಿತ ಡಾ. ಪುಟ್ಟರಾಜ ಗವಾಯಿಗಳರವರ 110ನೇ ಜಯಂತ್ಯುತ್ಸವ ಪ್ರಯುಕ್ತ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ನೇತ್ರದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು, ಸಾನಿಧ್ಯ ವಹಿಸಿದ ಶೀಲವಂತ ಹಿರೇಮಠದ ಶ್ರೀ ಘ.ಮ.ಪು.ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮಿಗಳು, ಉದ್ಘಾಟಕರಾಗಿ ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಡಾ. ಸತೀಶಕುಮಾರ ಹೊಸಮನಿ ಮುಖ್ಯ ಅತಿಥಿಗಳಾಗಿ ಡಾ. ಬಿ.ಎಫ್. ದಂಡಿನ, ಡಾ. ಅನಂತ ಕಾರ್ಕಳ, ಆನಂದಯ್ಯ ವಿರಕ್ತಮಠ, ಡಾ. ಭೀಮ್‌ಸಿಂಗ್ ರಾಠೋಡ, ಹೇಮಾಕ್ಷಿ ಕಿರೇಸೂರ ಧಾರವಾಡ, ಸೌಭಾಗ್ಯ ಅಶೋಕ ಕೊಪ್ಪ ಇವವ ಉಪಸ್ಥಿತಿಯಲ್ಲಿ ವಿಜಯಕುಮಾರ್ ಹಿರೇಮಠ ಮತ್ತು ಸ್ನೇಹಾ ವ್ಹಿ.ಹಿರೇಮಠ ದಂಪತಿಗಳಿಗೆ `ಆದರ್ಶ ದಂಪತಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಭಯ ಗುರುಗಳ ಆರ್ಶೀವಾದ ಸದಾ ಈ ದಂಪತಿಗಳ ಮೇಲೆ ಇರಲೆಂದು ಆಶಿಸುತ್ತೇವೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವ್ಹಿ.ವ್ಹಿ. ಹಿರೇಮಠ ಶುಭ ಕೋರಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img