ವಿಜಯಸಾಕ್ಷಿ ಸುದ್ದಿ, ಗದಗ : ನಾಡು ಕಂಡ ಜನಪ್ರಿಯ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ಮೃತ್ಯುಂಜಯ ಹೋಮ ಹಾಗೂ ಗಣಹೋಮ ನೆರವೇರಿಸಲಾಯಿತು.
ಈಗಿರುವ ಏಕೈಕ ಕನ್ನಡ ನಾಡಿನ ಪ್ರೀತಿಯ ಅಣ್ಣ ಎಂದರೆ ಅದು ಕುಮಾರಣ್ಣ ಮಾತ್ರ. ಆರು ಕೋಟಿ ಕನ್ನಡಿಗರು ಪ್ರೀತಿಯಿಂದ ಅಣ್ಣಾ ಎಂದು ಕರೆಯುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯದ ವಕ್ತಾರ ವೆಂಕನಗೌಡ ಗೋವಿಂದಗೌಡ್ರು ಅಭಿಪ್ರಾಯಪಟ್ಟರು.
ಪೂಜಾ ಕಾರ್ಯಕ್ರಮದಲ್ಲಿ ಬಸವರಾಜ್ ಅಪ್ಪಣ್ಣವರ್, ಜಿ.ಕೆ. ಹಿರೇಮಠ್ (ಕೊಳ್ಳಿಮಠ), ದೇವಪ್ಪ ಮಲ್ಲಸಮುದ್ರ, ಆನಂದ್ ಹಂಡಿ, ಪ್ರಫುಲ್ ಪುಣೇಕರ, ಅಮೀನ್ ಕಾಗದಗಾರ, ಅಶೋಕ್ ತ್ಯಾಮನವರ್, ಹನುಮಂತಪ್ಪ ಕಂಚಗಾರ, ಮೌಲಹುಸೇನ್ ತಾಂಬೂಲಿ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು. ಈ ಸಂದರ್ಭದಲ್ಲಿ ಪುಣ್ಯಾಶ್ರಮದ ನೂರಾರು ವಿದ್ಯಾರ್ಥಿಗಳು ಕುಮಾರಸ್ವಾಮಿಯವರ ಆರೋಗ್ಯಕ್ಕಾಗಿ ವಚನ ಪಠಣಗಳನ್ನು ಮಾಡಿದರು.


