ರೋಟರಿ ಕ್ಲಬ್‌ನಿಂದ 10 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ

0
rotary club
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿ, ರೋಟರಿ ಕ್ಲಬ್ ಗದಗ-ಬೆಟಗೇರಿ, ಇನ್ನರ್ ವ್ಹೀಲ್ ಕ್ಲಬ್ ಆಫ್ ಗದಗ ಮಿಡ್‌ಟೌನ್ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 189ನೇ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಹತ್ತು ಜನರಿಗೆ ಯಶಸ್ವಿಯಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಯಿತು.

Advertisement

ಶಿಬಿರವನ್ನು ನಿವೃತ್ತ ಎಸ್.ಪಿ ದಿ. ಎಸ್.ಎಸ್. ಹಸಬಿ ಮತ್ತು ದಿ. ಶ್ರೀಮತಿ ಪಾರ್ವತೆಮ್ಮ ಎಸ್. ಹಸಬಿ ಇವರ ಸ್ಮರಣಾರ್ಥ ಡಾ. ಸಿ.ಎಸ್. ಹಸಬಿ, ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರಾದ ಗೀತಾ ಭಿಕ್ಷಾವತಿಮಠ ಇವರ ಪ್ರಾಯೋಜತ್ವದಲ್ಲಿ ನಡೆಸಲಾಯಿತು. ಸುಮಾರು 65 ಜನ ರೋಗಿಗಳನ್ನು ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ಯೋಗ್ಯರಾದ 10 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಯುನ್ನು ಕೈಗೊಂಡರು.

ಶಸ್ತ್ರ ಚಿಕಿತ್ಸೆಗೂ ಮುನ್ನ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ ಸುಲ್ತಾನಪೂರ ವಹಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ಮಾತನಾಡಿದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿರಾದಾರ, ರೋಟರಿ ಕ್ಲಬ್ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ರೊ. ಬಾಲಕೃಷ್ಣ ಕಾಮತ್, ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಪ್ರೀತಿ ಶಿವಪ್ಪಯ್ಯನಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ರೊ. ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ರೊ. ಶಿವಾಚಾರ್ಯ ಎಸ್.ಹೊಸಳ್ಳಿಮಠ, ರೊ. ಡಾ. ಆರ್.ಬಿ. ಉಪ್ಪಿನ, ರೊ. ಡಾ. ಪ್ರದೀಪ ಉಗಲಾಟ, ರೊ. ಹೆಚ್.ಎಸ್. ಪಾಟೀಲ, ರೊ. ಅಕ್ಷಯ ಶೆಟ್ಟಿ, ಇನ್ನರ್‌ವ್ಹೀಲ್ ಸದಸ್ಯರಾದ ರಾಣಿ ಚಂದಾವರಿ ಮುಂತಾದವರು ಉಪಸ್ಥಿತರಿದ್ದರು.

ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ರುದ್ರೇಶ, ಜ್ಯೋತಿ ದೊಡ್ಡಮನಿ, ನೇತ್ರ ಹೆಚ್, ರಿಜವಾನವ, ಅಕ್ಷತಾ, ಸಿ.ವ್ಹಿ. ಪೂಜಾರ, ಆನಂದ ಸಿಂಗ್ರಿ ಚಿಕಿತ್ಸೆ ನಡೆಸಲು ಸಹಾಯ ಮಾಡಿದರು. ರೋಟರಿ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ರೊ. ಬಾಲಕೃಷ್ಣ ಕಾಮತ ವಂದಿಸಿದರು.


Spread the love

LEAVE A REPLY

Please enter your comment!
Please enter your name here