HomePolitics Newsಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ

ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ರೋಣ ತಾಲೂಕಿನ ಜೆಡಿಎಸ್ ಅಧ್ಯಕ್ಷರಾಗಿ ಶಿವಕುಮಾರ ಶಿರಹಟ್ಟಿ ನೇಮಕಗೊಂಡಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವೈ. ಮುಧೋಳ ಈ ನೇಮಕಾತಿಯನ್ನು ಮಾಡಿದ್ದು, ಸೋಮವಾರ ಕೋಡಿಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಧೋಳ, ಜೆಡಿಎಸ್ ಪಕ್ಷದ ರಾಷ್ಟಾçಧ್ಯಕ್ಷ ಎಚ್.ಡಿ. ದೇವೇಗೌಡರ ಬಡವರ ಹಿತವನ್ನು ಕಾಯುತ್ತ ಬಂದಿದ್ದಾರೆ. ಈ ಪಕ್ಷದಲ್ಲಿ ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಎಂದಿಗೂ ಯುವಕರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ರೋಣ ತಾಲೂಕಿಗೆ ನೇಮಕಗೊಂಡಿರುವ ಎಲ್ಲ ಪದಾಧಿಕಾರಿಗಳು ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿ ಪಕ್ಷವನ್ನು ಬಲಪಡಿಸಬೇಕೆಂದು ತಿಳಿಸಿದರು.

ವರಿಷ್ಠ ಮಂಡಳಿಯ ಆದೇಶದ ಮೇರೆಗೆ ನಾವು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಯವರನ್ನು ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಲೇ ಬೇಕಾದ ಕಾರ್ಯ ವಹಿಸಿದ್ದಾರೆ. ಈ ಮೂಲಕ ಈ ಸಾರೆಯೂ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಲು ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ. ಈ ದಿಶೆಯಲ್ಲಿಯೂ ನಿಮ್ಮ ಕಾರ್ಯ ಚುರುಕಿನಿಂದ ಸಾಗಬೇಕಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈರ್ವರೂ ಅಭ್ಯರ್ಥಿಗಳ ಜಯಕ್ಕೆ ಕಾರಣರಾಗಬೇಕೆಂದು ಮುಧೋಳ ನೂತನ ಪದಾಧಿಕಾರಿಗಳಿಗೆ ತಿಳಿಸಿದರು.

ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಎಸ್.ಸಿ. ಘಟಕದ ಅಧ್ಯಕ್ಷ ರಘು ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿ ಪರಶುರಾಮ ವಾಲ್ಮೀಕಿ, ತಾಲೂಕಾ ಯುವ ಘಟಕದ ಅಧ್ಯಕ್ಷ ವೀರೇಶ ಆರಾಧ್ಯಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೀರಪ್ಪ ಜಿರ್ಲ, ಗಜೇಂದ್ರಗಡ ತಾಲೂಕಾ ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಬಾದಶಹಾ ಬಾಗವಾನ, ಕೊಚಲಾಪುರ ಗ್ರಾಮ ಅಧ್ಯಕ್ಷ ಬುಡ್ಡಾಸಾಹೇಬ ಚಕೇರಿ, ನರೇಗಲ್ಲ ಹೋಬಳಿ ಅಧ್ಯಕ್ಷ ಯಲ್ಲಪ್ಪ ಹೊಸಮನಿ, ಕಾರ್ಯಾಧ್ಯಕ್ಷ ಅಶೋಕ ಬೆಟಗೇರಿ, ರೋಣ ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಲಪ್ಪ ಮರಲಿಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು.

ತಾಲೂಕಾ ಅಧ್ಯಕ್ಷ ಶಿವಕುಮಾರ ಶಿರಹಟ್ಟಿ ಮಾತನಾಡಿ, ನಿಮ್ಮ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಯುವಕರನ್ನು ಕರೆ ತಂದು ಪಕ್ಷಕ್ಕೆ ಬಲ ತುಂಬುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!