ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪ್ರೇಮಿ, ತ್ಯಾಗ ಜೀವಿ ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಬೇಸಿಗೆಯ ಉಚಿತ ತರಗತಿಗಳನ್ನು ಏಪ್ರೀಲ್ 1ರಿಂದ ನಗರದ ಭೂಮರಡ್ಡಿ ಸರ್ಕಲ್ ಹತ್ತಿರ (ಪುಟ್ಟರಾಜ ಗವಾಯಿಗಳವರ ಪುತ್ಥಳಿ ಬಳಿ) ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಆರಂಭಿಸಲಿದೆ.
Advertisement
ಅವಶ್ಯಕತೆಯುಳ್ಳ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿದ್ದು, ಅನುಭವಿ ಶಿಕ್ಷಕರ ತಂಡವು ತರಗತಿಗಳನ್ನು (ಉಚಿತ ಟ್ಯೂಶನ್) ನಡೆಸಲಿದೆ. ಹೆಸರು ನೋಂದಣಿಗಾಗಿ ಆಶ್ರಮವನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ-9972867605/ 9972867605 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದ್ದಾರೆ.