ವ್ಯಾಪಾರಸ್ಥರು, ರೈತರಿಗೆ ಅನುಕೂಲ ಕಲ್ಪಿಸಿ

0
apmc
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಕೃಷಿ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ವಿಷಯ ಕುರಿತು ಈಗಾಗಲೇ ಸಂಸ್ಥೆಯಲ್ಲಿ ಚರ್ಚಿಸಿ ಕೆಲವೊಂದು ವಿಷಯಗಳನ್ನು ತಿದ್ದುಪಡಿ ಮಾಡಿ ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೋರಿ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ಕಾರ್ಯದರ್ಶಿ ಎಂ.ಆರ್. ನದಾಫ ಇವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

Advertisement

ಸಂಸ್ಥೆಯ ಉಪಾಧ್ಯಕ್ಷ ಶರಣಬಸಪ್ಪ ಎಸ್.ಗುಡಿಮನಿ, ಸಂಸ್ಥೆಯ ಎಪಿಎಂಸಿ ಉಪ ಸಮಿತಿ ಚೇರಮನ್ ಶರಣಪ್ಪ ಕೆ.ಕುರಡಗಿ ಇವರನ್ನೊಳಗೊಂಡ ನಿಯೋಗದೊಂದಿಗೆ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿ, ಚರ್ಚಿಸಿ ಮನವಿ ಸಲ್ಲಿಸಿದರು.

ಹೊಸದಾಗಿ ಉದ್ಯಮಗಳನ್ನು ಸ್ಥಾಪಿಸಿದ ಸಂಸ್ಥೆಗೆ ಕೃಷಿ ಹುಟ್ಟುವಳಿಗಳನ್ನು ಖರೀದಿಸಲು ರೈತರಿಂದ ನೆರವಾಗಿ ಖರೀದಿ ಮಾಡಿದ ಮತ್ತು ಕಮೀಷನ್ ಏಜೆಂಟರಿಂದ ಖರೀದಿಸಿದ ಹುಟ್ಟುವಳಿಗಳಿಗೆ ಸೆಸ್‌ನಲ್ಲಿ ರಿಯಾಯತಿ ನೀಡುವುದು, ಎಪಿಎಂಸಿಕಚೇರಿ ಅಧಿಕಾರಿಗಳು ವ್ಯಾಪಾರಸ್ಥರ ಸಂಸ್ಥೆ ಹಾಗೂ ಉದ್ಯಮಿಗಳ ಪ್ರಾಂಗಣಕ್ಕೆ ಹೋಗಿ ಪರಿಶೀಲನೆ ಮಾಡುವುದು ಸೂಕ್ತವಲ್ಲ. ವ್ಯಾಪಾರಸ್ಥರು ತಮ್ಮಲ್ಲಿ ಇರುವ ಹುಟ್ಟುವಳಿಗಳ ಸಂಗ್ರಹಣೆಯ ವಿವರವನ್ನು ಸ್ವಯಂ ಘೋಷಿತವಾಗಿ ನೀಡಲು ಅನುಕೂಲ ಮಾಡಿಕೊಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೆಲಸದ ಒತ್ತಡ ಹೆಚ್ಚಾದ ಕಾರಣ, ಸಿಬ್ಬಂದಿಗಳನ್ನು ನೇಮಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಹರೀಶಕುಮಾರ ಎಸ್.ಶಹಾ, ಸಹ ಗೌರವ ಕಾರ್ಯದರ್ಶಿ ರಾಜಣ್ಣಾ ಬಿ.ಮಲ್ಲಾಡದ, ಕೋಶಾಧ್ಯಕ್ಷ ಅಶೋಕ ಕೆ.ಪಾಟೀಲ, ದಲಾಲ ವರ್ತಕರ ಸಂಘದ ಅಧ್ಯಕ್ಷ ಮುರುಘರಾಜೇಂದ್ರ ಎಂ.ಬಡ್ನಿ, ಎಪಿಎಂಸಿ ಖರೀದಿ ವರ್ತಕರ ಸಂಘದ ಅಧ್ಯಕ್ಷ ಶೇಖರಪ್ಪ ಫ.ಗದ್ದಿಕೇರಿ, ಸಂಸ್ಥೆಯ ಉಪ ಸಮಿತಿ ಸದಸ್ಯರಾದ ಸಿ.ಪಿ. ಹುಣಸಿಕಟ್ಟಿ, ಎಚ್.ಆರ್. ಶಾಪೂರ, ಸಿದ್ದರಾಮಪ್ಪ ಎ. ಉಮಚಗಿ, ಸದಸ್ಯರಾದ ರವೀಂದ್ರ ಗದಗ, ಪ್ರಮೋದ ವಾರಕರ ಸೇರಿದಂತೆ ಅನೇಕ ವ್ಯಾಪಾರಸ್ಥರು ಉಪಸ್ಥಿತರಿದ್ದರೆಂದು ಸಂಸ್ಥೆಯ ಗೌ.ಕಾರ್ಯದರ್ಶಿ ಪ್ರಕಾಶ ಎಸ್.ಉಗಲಾಟದ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here