ವಿರೋಧಿಗಳ ತುಳಿತಕ್ಕೆ ಕಾಂಗ್ರೆಸ್ ಜಗ್ಗದು : ಜಿ.ಎಸ್. ಪಾಟೀಲ

0
abbigeri
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ದೇಶಕ್ಕೆ ಸಂವಿಧಾನವನ್ನು ನೀಡಿ ಎಲ್ಲರಿಗೂ ಸಮ ಬಾಳು, ಎಲ್ಲರಿಗೂ ಸಮ ಪಾಲು ಎಂದು ಬೋಧಿಸಿದವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರು. ಅವರು ರಚಿಸಿದ ಸಂವಿಧಾನವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಅಂತಹ ಸಂವಿಧಾನ ಈಗ ಅಪಾಯದಲ್ಲಿದೆ.

Advertisement

ದೇಶದಲ್ಲಿನ ಸಾಂವಿಧಾನಿಕ ನಾಯಕರನ್ನು ಉದ್ದೇಶಪೂರ್ವಕವಾಗಿ ಜೈಲಿಗೆ ಅಟ್ಟುವ ಮೂಲಕ ಸಂವಿಧಾನವನ್ನು ಅವಮಾನಿಸಲಾಗುತ್ತಿದೆ. ಈ ಮೂಲಕ ವಿರೋಧ ಪಕ್ಷದವರನ್ನು ದಮನ ಮಾಡುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ರೋಣ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಸಮೀಪದ ಅಬ್ಬಿಗೇರಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣಾರ್ಥವಾಗಿ ಅಬ್ಬಿಗೇರಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ವಿರೋಧ ಪಕ್ಷಗಳ ಮೇಲೆ ಇನ್ನಿಲ್ಲದ ಸಂವಿಧಾನ ವಿರೋಧಿ ಚಟುವಿಟಕೆಗಳನ್ನು ಕೈಗೊಳ್ಳುವ ಮೂಲಕ ಅವರ ಆತ್ಮವಿಶ್ವಾಸವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವುದು, ಇಲ್ಲದ ದಂಡವನ್ನು ತುಂಬಲು ತನಿಖಾ ಸಂಸ್ಥೆಗಳ ಮೂಲಕ ಒತ್ತಡವನ್ನು ತರುವುದರ ಮೂಲಕ ಕಾಂಗ್ರೆಸ್‌ನ್ನು ತುಳಿಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಕಾಂಗ್ರೆಸ್ ಪಕ್ಷ ಇದಾವುದಕ್ಕೂ ಜಗ್ಗದು, ಕುಗ್ಗದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಪಲ್ಲೇದ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಯೋಜನೆಗಳು, ಅನೇಕ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ತಾವು ನುಡಿದಂತೆ ನಡೆಯುವವರು ಎಂದು ಸಾಧಿಸಿ ತೋರಿಸಿದ್ದಾರೆ. ಆದರೆ ಕೇಂದ್ರ ಸರಕಾರ ಇಂತಹ ಒಂದೂ ಯೋಜನೆಯನ್ನು ಜಾರಿಗೊಳಿಸದೆ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಬಿಡುವ ಮಾತೇ ಇಲ್ಲ. ಹೀಗಾಗಿ ನಮ್ಮ ಪಕ್ಷ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಶ್ರೀಗಳು, ಡಾ. ಆರ್.ಬಿ. ಬಸವರಡ್ಡೇರ, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ವಿ.ಆರ್. ಗುಡಿಸಾಗರ, ವಿ.ಬಿ. ಸೋಮಕಟ್ಟಿಮಠ, ಅಕ್ಷಯ ಪಾಟೀಲ, ಎಸ್.ಎಚ್. ಸೋಂಪೂರ, ರೂಪಾ ಅಂಗಡಿ, ಗುರಣ್ಣ ಅವರೆಡ್ಡಿ, ಸುರೇಶ ಬಸವರಡ್ಡೇರ, ಮಂಜು ಪಸಾರದ, ಸಕ್ರಗೌಡ್ರು ಪಾಟೀಲ, ಹನುಮಂತಪ್ಪ ದ್ವಾಸಲ, ಸಿದ್ದು ಹನುಮನಾಳ, ಮುತ್ತಪ್ಪ ಕುಕನೂರ, ಬಸವರಾಜ ತಳವಾರ, ಮಹಾದೇವಪ್ಪ ಕಂಬಳಿ, ಭೀಮಶಿ ಮಲ್ಲಾಪೂರ, ಸಂಗಣ್ಣ ಉಪಾಧ್ಯ, ಲಕ್ಷö್ಮಣ ಹಿರೇಮನಿ, ಅಂದಪ್ಪ ವೀರಾಪೂರ, ಸುರೇಶ ಶಿರೋಳ, ಶಿವಪುತ್ರಪ್ಪ ಕೆಂಗಾರ, ಸಿ.ಕೆ. ಕಾಳಗಿ, ರಾಮನಗೌಡ ಹಲಕುರ್ಕಿ, ಮಹಾಂತೇಶ ತಳವಾರ, ಬಾಬೂ ಬನ್ನಿಕೊಪ್ಪ, ಮಂಜು ಚಿತ್ತರಗಿ, ಸೋಮು ವಡವಿ, ಎ.ಕೆ. ಮಳಗಿ, ಭೀಮಣ್ಣ ಚಿಕ್ಕೇನಕೊಪ್ಪ, ಮಲ್ಲಣ್ಣ ಕಲ್ಲೇಶ್ಯಾನಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿಯ ಕೆಲವು ನಾಯಕರು ನಾವು ಸಂವಿಧಾನವನ್ನು ಬದಲಿಸಲೆಂದೇ ಅಧಿಕಾರಕ್ಕೆ ಬರುತ್ತೇವೆ ಎಂಬ ಮಾತುಗಳನ್ನು ಹೇಳುತ್ತಾರೆ. ಈ ಮೂಲಕ ಅವರು ಭಾರತದ ಸಂವಿಧಾನವನ್ನು ಅಪವಿತ್ರಗೊಳಿಸಲು ಮುಂದಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಇಂಥವರಿಗೆ ತಕ್ಕ ಪಾಠವನ್ನು ಕಲಿಸಬೇಕು. ಅದಕ್ಕಾಗಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಬಹುಮತದಿಂದ ಆರಿಸಿ ತರುವಂತೆ ನೀವೆಲ್ಲರೂ ಕಾರ್ಯ ನಿರ್ವಹಿಸಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.


Spread the love

LEAVE A REPLY

Please enter your comment!
Please enter your name here