ಗದಗ: ಶ್ರೀರಾಮಸೇನೆ ಮತ್ತು ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿರೊ ಬಂದ್ ಕರೆಗೆ ಹಿಂದೂ-ಮುಸ್ಲಿಂ ಸಮಾಜದ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅ. 19ರಂದು ಶಾಂತಿ ಕದಡುವ ಪ್ರತಿಭಟನೆಗೆ ನಮ್ಮ ಬೆಂಬಲ ಇಲ್ಲ ಎಂದು ಹಿಂದೂ-ಮುಸ್ಲಿಂ ಮುಖಂಡರಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
Advertisement
ಬಂದ್ ಕರೆಯಿಂದ ಆರ್ಥಿಕ, ವ್ಯವಹಾರ ಕುಂಠಿತವಾಗುತ್ತದೆ. ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನ್ನವರ್ ಲಕ್ಷ್ಮೇಶ್ವರ ಪಟ್ಟಣದ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ಸರಿಯಲ್ಲ, ಶ್ರೀರಾಮ ಸೇನೆ ಅಕ್ಟೋಬರ್ 19 ರಂದು ಬಂದ್ ಕರೆಗೆ ಆಸ್ಪದ ನೀಡಿದರೆ, ಅದರ ವಿರುದ್ಧ ನಮ್ಮ ಹೋರಾಟ ಮಾಡುತ್ತೇವೆ ಎಂದು ಹಿಂದೂ-ಮುಸ್ಲಿಂ ಮುಖಂಡರು ರಚ್ಚರಿಕೆ ನೀಡಿದ್ದಾರೆ.