ವಿಜಯಪುರ:-ಬಾರ್ ನಲ್ಲಿ ನೀರು ಎಂದು ಆ್ಯಸಿಡ್ ಕುಡಿದ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ಜರುಗಿದೆ.
40 ವರ್ಷದ ಮಹಮ್ಮದ ಶಫೀಕ್ ಮನಿಯಾರ್ ಮೃತ ವ್ಯಕ್ತಿ. ಮಹಮ್ಮದ ಸಾವಿಗೆ ಬಾರ್ ಮಾಲೀಕ, ಮ್ಯಾನೇಜರ್ ಹಾಗೂ ವೇಟರ್ ನಿರ್ಲಕ್ಷವೇ ಕಾರಣವೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ನಿನ್ನೆ ಬೆಳಿಗ್ಗೆ ನಗರದ ಎಲ್ಬಿಎಸ್ ಮಾರುಕಟ್ಟೆ ಮೇಲಿರುವ ಸಿದ್ದಾರ್ಥ್ ಬಾರ್‌ನಲ್ಲಿ ಘಟನೆ ನಡೆದಿತ್ತು. ಮೊಹಮ್ಮದ್ ಪತ್ನಿ ಶಾಹೀದಾಳಿಂದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬಾರ್ ಮಾಲೀಕ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಎಸ್ ಪಾಟೀಲ್, ಮ್ಯಾನೇಜರ್ ಅಪ್ಪಾಸಾಬ್ ಮಮದಾಪೂರ, ವೇಟರ್ ಆನಂದ ಶಿಂಧೆ ಮೇಲೆ ಬಿಎನ್ಎಸ್ ಕಾಯ್ದೆ 106 (1), 3 (5) ಕಲಂ ಪ್ರಕಾರ ದೂರು ದಾಖಲಿಸಲಾಗಿದೆ. ಬಾರ್ ಟೇಬಲ್ ಮೇಲೆ ನಿರ್ಲಕ್ಷ್ಯದಿಂದ ಆ್ಯಸಿಡ್ ಬಾಟಲ್ ಇಟ್ಟಿದ್ದೇ ಮೊಹಮ್ಮದ ಸಾವಿಗೆ ಕಾರಣವೆಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ



